ರಾಯಚೂರು, 02 ಆಗಸ್ಟ್ (ಹಿ.ಸ.) :
ಆ್ಯಂಕರ್ : 2025-26 ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಗೆ ನಿಗದಿಪಡಿಸಿದ ಗುರಿಯಂತೆ ಹಂತ ಹಂತವಾಗಿ ವಿವಿಧ ಸಂಸ್ಥೆಗಳಿಂದ ಯೂರಿಯಾ, ಡಿ.ಎ.ಪಿ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರ ಜಿಲ್ಲೆಗೆ ಬರುತ್ತಿದೆ.
ಮುಂಬರುವ ದಿನಗಳಲ್ಲಿ ಸಹ ರಸಗೊಬ್ಬರ ಜಿಲ್ಲೆಗೆ ಬರುತ್ತದೆ. ರೈತರು ರಸಗೊಬ್ಬರ ಕೊರತೆ ಇದೆ ಎಂದು ಭಾವಿಸದೆ ಬೆಳೆಗೆ ಬೇಕಾಗುವ ಒಟ್ಟು ರಸಗೊಬ್ಬರವನ್ನು ಒಂದೇ ಸಲ ಖರೀದಿಸಲು ಮುಂದಾಗಬಾರದು. ಬೆಳೆಗಳಿಗೆ ಬೇಕಾಗುವ ರಸಗೊಬ್ಬರವನ್ನು ಆಯಾ ಹಂತಕ್ಕೆ ಅವಶ್ಯಕತೆಗನುಗುಣವಾಗಿ ಮಾತ್ರ ಖರೀದಿಸಬೇಕೇಂದು ತಿಳಿಯಪಡಿಸಿದೆ. ರಸಗೊಬ್ಬರ ವಿತರಕರಿಗೆ ಯೂರಿಯಾ ರಸಗೊಬ್ಬರವನ್ನು ನೀಡಲಾಗಿರುತ್ತದೆ.
ರೈತರು ಬೆಳೆಗೆ ಅವಶ್ಯಕತೆ ಇರುವ ಆಧಾರದ ಮೇಲೆ ರಸಗೊಬ್ಬರವನ್ನು ಬೆಳೆಗೆ ನೀಡಬೇಕು ಮತ್ತು ಯೂರಿಯಾ ರಸಗೊಬ್ಬರವನ್ನು ಕಳೆನಾಶಕ ಜೊತೆಗೆ ಬಳಸದೆ ಅನ್ಯ ಮಾರ್ಗವಾಗಿ ಮರಳು ಅಥವಾ ಮಣ್ಣು ಬಳಸಬೇಕು ಹಾಗೂ ರಸಗೊಬ್ಬರದ ಕೊರತೆ ಬಗ್ಗೆ ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕರು ರಾಯಚೂರ ಜಿಲ್ಲೆಯ ರೈತ ಬಾಂಧವರಲ್ಲಿ ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್