ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಗುಂಡೂರಾವ್ ಚಾಲನೆ
ಬೆಂಗಳೂರು, 2 ಆಗಸ್ಟ್ (ಹಿ.ಸ.): ಆ್ಯಂಕರ್: ಬೆಂಗಳೂರಿನ ಗಾಂಧಿನಗರ ಕ್ಷೇತ್ರದ ಓಕಲೀಪುರ, ರಾಮಚಂದ್ರಪುರ ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ನೂತನವಾಗಿ ನಿರ್ಮಿಸುತ್ತಿರುವ ಕಾಂಕ್ರೀಟ್ ರಸ್ತೆಗಳ ಸ್ಥಳಗಳನ್ನು ಅಧಿಕಾರಿಗಳ ಸಮಕ್ಷದ
Gundurao


ಬೆಂಗಳೂರು, 2 ಆಗಸ್ಟ್ (ಹಿ.ಸ.):

ಆ್ಯಂಕರ್:

ಬೆಂಗಳೂರಿನ ಗಾಂಧಿನಗರ ಕ್ಷೇತ್ರದ ಓಕಲೀಪುರ, ರಾಮಚಂದ್ರಪುರ ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಗುದ್ದಲಿ ಪೂಜೆಯನ್ನು ನೆರವೇರಿಸಿದರು.

ನೂತನವಾಗಿ ನಿರ್ಮಿಸುತ್ತಿರುವ ಕಾಂಕ್ರೀಟ್ ರಸ್ತೆಗಳ ಸ್ಥಳಗಳನ್ನು ಅಧಿಕಾರಿಗಳ ಸಮಕ್ಷದಲ್ಲಿ ಪರಿಶೀಲನೆ ನಡೆಸಿ, ಸಾನಿಟರಿ ಲೈನ್, ಮಳೆ ಬಿದ್ದಾಗ ರಸ್ತೆಗಳಲ್ಲಿ ಒಂದಡೆ ನೀರು ಶೇಖರಣೆಯಾಗದಂತೆ ಸರಾಗವಾಗಿ ಹರಿದು ರಾಜಕಾಲುವೆಗಳನ್ನು ಸೇರುವಂತೆ ರಸ್ತೆಗಳನ್ನು ಸಿದ್ದಪಡಿಸಲು ಸೂಚನೆ ನೀಡಿದರು.

ಇದರ ಜೊತೆಗೆ ಕ್ಷೇತ್ರದ ಜನತೆಯ ಅಹವಾಲು ಸ್ವೀಕರಿಸಿ, ಸಾರ್ವಜನಿಕರು ಸಲ್ಲಿಸಿದ ದೂರುಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande