ಲಕ್ಕುಂಡಿ ಗ್ರಾಮದ ವ್ಯಕ್ತಿ ನಾಪತ್ತೆ
ಹಿರೇಹಡಗಲಿ, 02 ಆಗಸ್ಟ್ (ಹಿ.ಸ.) : ಆ್ಯಂಕರ್ : ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ನಿವಾಸಿ ಮೈಲಾರಪ್ಪ ಗಡಗಿ(54) ಮೈಲಾರ ಕಾರ್ಣಿಕ ನೋಡಲು ಹೋದವರು ವಾಪಸು ಬಾರದೆ ನಾಪತ್ತೆಯಾಗಿರುವ ಕುರಿತು ಹಿರೇಹಡಗಲಿ ಪೊಲೀಸ್, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹಿರೇಹಡಗಲಿ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಭರತ್ ಪ
ಲಕ್ಕುಂಡಿ ಗ್ರಾಮದ ವ್ಯಕ್ತಿ ನಾಪತ್ತೆ


ಹಿರೇಹಡಗಲಿ, 02 ಆಗಸ್ಟ್ (ಹಿ.ಸ.) :

ಆ್ಯಂಕರ್ : ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ನಿವಾಸಿ ಮೈಲಾರಪ್ಪ ಗಡಗಿ(54) ಮೈಲಾರ ಕಾರ್ಣಿಕ ನೋಡಲು ಹೋದವರು ವಾಪಸು ಬಾರದೆ ನಾಪತ್ತೆಯಾಗಿರುವ ಕುರಿತು ಹಿರೇಹಡಗಲಿ ಪೊಲೀಸ್, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹಿರೇಹಡಗಲಿ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಭರತ್ ಪ್ರಕಾಶ ಅವರು ತಿಳಿಸಿದ್ದಾರೆ.

ವ್ಯಕ್ತಿ ಚಹರೆ : 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಎಣ್ಣೆಗಪ್ಪು ಮೈ ಬಣ್ಣ, ಮಾತನಾಡಲು ಬರುವುದಿಲ್ಲ ಮತ್ತು ಕಿವಿ ಕೇಳುವುದಿಲ್ಲ (ಮೂಕ ಮತ್ತು ಕಿವುಡ). ಮಾತನಾಡಲು ಬರದಿದ್ದಕ್ಕೆ ಕೈ ಸನ್ನೆ ಮತ್ತು ಬಾಯಿ ಸನ್ನೆ ಮಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ದೋತಿ ಮತ್ತು ಬಿಳಿ ಬಣ್ಣದ ತುಂಬು ತೋಳಿನ ಅಂಗಿ ಧರಿಸಿರುತ್ತಾರೆ.

ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಹಿರೇಹಡಗಲಿ ಪೊಲೀಸ್, ಠಾಣೆ ಕಂಟ್ರೋಲ್ ರೂಂ ದೂ.08394-200202, ಮೊ.9480805700, ಪೊಲೀಸ್,ಸಬ್-ಇನ್ಸ್‍ಪೆಕ್ಟರ್ ಮೊ.9480805781 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande