ಕೆಎಸ್ಒಜಿಎ ವಲಯ ಕಾರ್ಯಾಗಾರ ಉದ್ಘಾಟನೆ
ಬೀದರ್, 2 ಆಗಸ್ಟ್ (ಹಿ.ಸ.): ಆ್ಯಂಕರ್: ಬೀದರ ಆಬ್ಸ್ಟೆಟ್ರಿಕ್ಸ್ ಮತ್ತು ಗೈನಕಾಲಜಿ ಸೊಸೈಟಿ ಹಾಗೂ ಬೀದರ ಮೆಡಿಕಲ್ ಸೈನ್ಸ್ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಕೆಎಸ್ಒಜಿಎ ವಲಯ ಕಾರ್ಯಾಗಾರ ಮತ್ತು ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು. ಈ ವೇ
Inauguration


ಬೀದರ್, 2 ಆಗಸ್ಟ್ (ಹಿ.ಸ.):

ಆ್ಯಂಕರ್:

ಬೀದರ ಆಬ್ಸ್ಟೆಟ್ರಿಕ್ಸ್ ಮತ್ತು ಗೈನಕಾಲಜಿ ಸೊಸೈಟಿ ಹಾಗೂ ಬೀದರ ಮೆಡಿಕಲ್ ಸೈನ್ಸ್ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಕೆಎಸ್ಒಜಿಎ ವಲಯ ಕಾರ್ಯಾಗಾರ ಮತ್ತು ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು.

ಈ ವೇಳೆ ಮಾತನಾಡಿ ಅವರು, ಮಹಿಳೆ ಮತ್ತು ತಾಯಂದಿರ ಆರೋಗ್ಯದಲ್ಲಿ ಉತ್ತಮ ಸೇವೆ ನೀಡುತ್ತಿರುವ ಮಹಿಳಾ ವೈದ್ಯಕೀಯ ತಜ್ಞರ ತಂಡವು ಬೀದರ ನಲ್ಲಿ ಮಹತ್ವದ ವಿಜ್ಞಾನ ಸಮ್ಮೇಳನ ಹಮ್ಮಿಕೊಂಡಿರುವುದು ಹೆಮ್ಮೆಪಡುವ ವಿಷಯವಾಗಿದೆ ಎಂದರು.

ಚಿಕಿತ್ಸಾ ಕ್ಷೇತ್ರದ ಹೊಸ ಸಂಶೋಧನೆಗಳು, ಅನುಭವಗಳ ವಿನಿಮಯ ಹಾಗೂ ಉತ್ತಮ ಸೇವಾ ತಂತ್ರಗಳು ಈ ಕಾರ್ಯಾಗಾರದಲ್ಲಿ ಚರ್ಚೆಯಾಗಲಿದ್ದು, ಜಿಲ್ಲೆಯಲ್ಲಿ ಆರೋಗ್ಯ ಸೇವೆಗಳ ಗುಣಮಟ್ಟ ಹೆಚ್ಚಿಸುವತ್ತ ಇದೊಂದು ಉತ್ತಮ ಹೆಜ್ಜೆಯಾಗಲಿದೆ ಎಂದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande