ಆಗಸ್ಟ್ 07ರಂದು ಉದ್ಯೋಗ ಮೇಳ
ವಿಜಯಪುರ, 02 ಆಗಸ್ಟ್ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ವಿಜಯಪುರ ಹಾಗೂ ಸಿಕ್ಯಾಬ್ ಸಂಸ್ಥೆಯ ಮಲಿಕ್ ಸಂದಲ್ ಪಾಲಿಟೆಕ್ನಿಕ್ ವಿಜಯಪುರ, ಇವರ ಸಹಯೋಗದೊಂದಿಗೆ ನಗರದ ಬಾಗಲಕೋಟೆ ರಸ್ತೆಯಲ್ಲಿರುವ ಸಿಕ್ಯಾಬ್ ಸಂಸ್ಥೆಯ ಮಲಿಕ್ ಸಂದಲ್ ಪಾಲಿಟೆಕ್ನಿಕ್ ಕಾಲೇಜ್‌ನಲ್ಲಿ ಆ.7ರಂದ
ಆಗಸ್ಟ್ 07ರಂದು ಉದ್ಯೋಗ ಮೇಳ


ವಿಜಯಪುರ, 02 ಆಗಸ್ಟ್ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ವಿಜಯಪುರ ಹಾಗೂ ಸಿಕ್ಯಾಬ್ ಸಂಸ್ಥೆಯ ಮಲಿಕ್ ಸಂದಲ್ ಪಾಲಿಟೆಕ್ನಿಕ್ ವಿಜಯಪುರ, ಇವರ ಸಹಯೋಗದೊಂದಿಗೆ ನಗರದ ಬಾಗಲಕೋಟೆ ರಸ್ತೆಯಲ್ಲಿರುವ ಸಿಕ್ಯಾಬ್ ಸಂಸ್ಥೆಯ ಮಲಿಕ್ ಸಂದಲ್ ಪಾಲಿಟೆಕ್ನಿಕ್ ಕಾಲೇಜ್‌ನಲ್ಲಿ ಆ.7ರಂದು ಉದ್ಯೊಗ ಮೇಳ ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಯೋಗ ಮೇಳದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಎಂಎನ್‌ಸಿ ಕಂಪನಿಗಳು ಹಾಗೂ ಸ್ಥಳೀಯ ಖಾಸಗಿ ಕಂಪನಿಗಳಿ0ದ ನಾನಾ ಹುದ್ದೆಗಳ ನೇಮಕಾತಿ ನಡೆಯಲಿದೆ.

ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮಾ, ಹಾಗೂ ಯಾವುದೇ ಪದವಿ/ಸ್ನಾತಕೋತ್ತರ ಪದವಿ, ಪಾಸಾದಂತಹ 35 ವರ್ಷ ವಯಸ್ಸಿನೊಳಗಿನ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ತಮ್ಮ ಶಾಲಾ ದಾಖಲಾತಿಗಳು, ಕನಿಷ್ಟ 5 ಬಾಯೊಡೆಟಾ, ಆಧಾರ ಕಾರ್ಡಗಳ 2ಸೆಟ್ ಝರಾಕ್ಸನೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ವಿಜಯಪುರಕ್ಕೆ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ. 9538078655 / 9945000793/ 9886764470 ಗೆ ಸಂಪರ್ಕಿಸುವ0ತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande