ಮಗುವಿಗೆ ಆರು ತಿಂಗಳವರೆಗೆ ತಪ್ಪದೆ ಎದೆಹಾಲು ಮಾತ್ರ ನೀಡಿ : ಡಿಎಚ್‍ಓ
ರಾಯಚೂರು, 02 ಆಗಸ್ಟ್ (ಹಿ.ಸ.) : ಆ್ಯಂಕರ್ : ಬಾಲ್ಯದಲ್ಲಿ ಮಗುವಿನ ಆರೋಗ್ಯವನ್ನು ಸದೃಢ ಮಾಡಿದಾಗ ಭವಿಷ್ಯದಲ್ಲಿ ಸಶಕ್ತ ವ್ಯಕ್ತಿಯನ್ನು ರೂಪಿಸಲು ಸಾಧ್ಯ. ಇದಕ್ಕಾಗಿ ಹೆರಿಗೆ ನಂತರದಲ್ಲಿ ಮೊದಲ ಅರ್ಧ ಗಂಟೆಯೊಳಗೆ ತಕ್ಷಣವೇ ಸ್ತನ್ಯಪಾನ ಮಾಡಿಸಲು ಮರೆಯಬಾರದು. ಇದಕ್ಕಾಗಿ ಪಾಲಕರ ಸಹಕಾರ ಅತ್ಯಗತ್ಯವಾಗಿದೆ
Give your baby only breast milk for six months without fail: DHO


Give your baby only breast milk for six months without fail: DHO


ರಾಯಚೂರು, 02 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬಾಲ್ಯದಲ್ಲಿ ಮಗುವಿನ ಆರೋಗ್ಯವನ್ನು ಸದೃಢ ಮಾಡಿದಾಗ ಭವಿಷ್ಯದಲ್ಲಿ ಸಶಕ್ತ ವ್ಯಕ್ತಿಯನ್ನು ರೂಪಿಸಲು ಸಾಧ್ಯ. ಇದಕ್ಕಾಗಿ ಹೆರಿಗೆ ನಂತರದಲ್ಲಿ ಮೊದಲ ಅರ್ಧ ಗಂಟೆಯೊಳಗೆ ತಕ್ಷಣವೇ ಸ್ತನ್ಯಪಾನ ಮಾಡಿಸಲು ಮರೆಯಬಾರದು. ಇದಕ್ಕಾಗಿ ಪಾಲಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರ ಬಾಬು ಮನವಿ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ರಾಯಚೂರು ರವರ ಸಂಯುಕ್ತಾಶ್ರಯದಲ್ಲಿ ನಗರದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ನಡೆದ ವಿಶ್ವ ಸ್ತನ್ಯ ಪಾನ ಸಪ್ತಾಹ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಅನಾದಿ ಕಾಲದಿಂದಲೂ ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ ಎನ್ನುವುದು ಜನಸಾಮಾನ್ಯರಲ್ಲಿ ಬೇರುಬಿಟ್ಟಿದ್ದರೂ ಕೆಲವರು ಮಗುವಿನ ಆರೋಗ್ಯಕ್ಕೆ ಹಾನಿ ಮಾಡಬಹುದಾದ ಸಕ್ಕರೆ ನೀರು, ಬೆಲ್ಲದ ನೀರು ಜೇನುತುಪ್ಪ ಕೊಡುತ್ತಾರೆ. ಕುಟುಂಬಕ್ಕೆ ಇಂತಹ ತಪ್ಪು ಮಾಹಿತಿಯನ್ನು ಯಾರಾದರೂ ನೀಡಿದರೆ ದಯವಿಟ್ಟು ಅದನ್ನು ತಿರಸ್ಕರಿಸಬೇಕು. ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು ಕಾರ್ಯ ನಿರ್ವಹಿಸುತ್ತಿದ್ದು ಎಲ್ಲ ಖಾಯಿಲೆಗಳಿಗೆ ಅಗತ್ಯ ಚಿಕಿತ್ಸೆ ಔಷಧೋಪಚಾರ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆಯಲು ವಿನಂತಿಸಿದರು.

ಎಮ್.ಎನ್, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಆರೋಗ್ಯ ಅಧಿಕಾರಿಗಳಾದ ಡಾ.ನಂದಿತಾ ಅವರು ಪ್ರಾಸ್ತಾವಿಕ ಮಾತನಾಡಿ, ತಾಯಿ ಎದೆ ಹಾಲು ನೀಡುವುದರಲ್ಲಿ ಹೂಡಿಕೆ ಮಾಡಿದರೆ ಮಕ್ಕಳ ಆರೋಗ್ಯಕರ ಭವಿಷ್ಯಕ್ಕಾಗಿ ಹೂಡಿಕೆ ಮಾಡಿದಂತೆ ಎಂಬುದು ಈ ವರ್ಷದ ಘೋಷಣೆಯಾಗಿದ್ದು, ಇದು ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಮಗುವಿನ ಆರೋಗ್ಯಕ್ಕಾಗಿ ಹಣ ವೆಚ್ಚ ಮಾಡುವುದನ್ನು ತಪ್ಪಿಸಲು ಹೆರಿಗೆ ನಂತರದಲ್ಲಿ ಮೊದಲ ಅರ್ಧ ಗಂಟೆಯೊಳಗೆ ತಕ್ಷಣವೇ ಸ್ತನ್ಯಪಾನ ಮಾಡಿಸಬೇಕು ಎಂಬುದನ್ನು ಅರಿಯಬೇಕು ಎಂದರು.

ಹೆರಿಗೆ ನಂತರದಲ್ಲಿ ತಕ್ಷಣ ಬರುವ ಹಳದಿ (ಕೊಲೆಸ್ಟ್ರಮ್) ಹಾಲು ಶಿಶುವಿಗೆ ಶಕ್ತಿವರ್ಧಕವಾಗಿದೆ. ಸ್ತನ್ಯಪಾನ ತಾಯಿಯ ಮಮತೆಯ ಪ್ರತೀಕವಾಗಿದೆ. ಪ್ರತಿಯೊಬ್ಬ ತಾಯಿಯಲ್ಲಿ ತನ್ನ ಮಗುವಿಗೆ ಸಾಕಾಗುವಷ್ಟು ಹಾಲನ್ನು ಉತ್ಪಾದಿಸುವ ಸಾಮಥ್ರ್ಯವಿದೆ. ಮಗು ಹಾಲುಂಡಷ್ಟು ಎದೆಹಾಲು ಹೆಚ್ಚು ಉತ್ಪತ್ತಿಯಾಗುವುದು. ಮಗುವಿಗೆ ಹಾಲು ಸಾಕಾಗಲ್ಲ ಎಂಬ ಮನೋಭಾವನೆಯನ್ನು ತೊಡೆದು ಹಾಕಿ ಮಗುವಿನ ಸಮರ್ಪಕವಾದ ಪೆÇೀಷಣೆಗೆ ತಾಯಿ ತನ್ನ ಸಾಮಥ್ರ್ಯ ಅರಿತು ಎದೆಹಾಲನ್ನು ಉಣಿಸಲು ಮುಂದಾಗಬೇಕು. ಎದೆಹಾಲು ಬರುತ್ತಿಲ್ಲವೆಂದು ಬಾಟಲಿ ಹಾಲು ಗ್ರೈಫ್ ವಾಟರ್ ಇನ್ನೀತರ ಬೇರೆ ಏನೂ ಕುಡಿಸಬಾರದು. ಮಗುವಿಗೆ ಎದೆಹಾಲಿನ ಜೊತೆಗೆ ಲಸಿಕೆಯನ್ನು ಹಾಕಿಸಬೇಕು ಎಂದು ತಾಯಿಂದಿರರಿಗೆ ತಿಳಿಸಿದರು. ಈ ದಿಶೆಯಲ್ಲಿ ಜಿಲ್ಲೆಯಾದ್ಯಂತ ನಿರಂತರವಾಗಿ ಎಲ್ಲ ತಾಲೂಕುಗಳಲ್ಲಿ ನೀಡುವ ಜಾಗೃತಿ ಶಿಬಿರಗಳ ಮೂಲಕ ಮಾಹಿತಿ ಪಡೆದುಕೊಳ್ಳುವಂತೆ ವಿನಂತಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮಹಮ್ಮದ್ ಶಾಕೀರ್, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಜ್ವಲ ಕುಮಾರ್, ರೆಡಿಯಾಲಾಜಿಸ್ಟ್ ಡಾ.ಇರ್ಮಾನ ಪರವೇಜ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ., ತಜ್ಞವೈದ್ಯರಾದ ಡಾ.ಭುವನೇಶ್ವರಿ, ಡಾ.ಬಸ್ಸಮ್ಮ, ಮಕ್ಕಳ ತಜ್ಞರು, ಶುಶ್ರೂಷಣಾಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ತಾಯಂದಿರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande