ಬಳ್ಳಾರಿ, 02 ಆಗಸ್ಟ್ (ಹಿ.ಸ.) :
ಆ್ಯಂಕರ್ : ನಗರದ ಈದ್ಗಾ ರಸ್ತೆಯ ಹಿರಾಳ್ ಕುಡಂನ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಪ್ರಸ್ತಕ ಸಾಲಿಗೆ 6ನೇ ತರಗತಿಯಲ್ಲಿ ಖಾಲಿಯಿರುವ ಸೀಟ್ ಗಳಿಗಾಗಿ ದಾಖಲಾತಿಸಿಕೊಳ್ಳಲು ಅರ್ಹ ಮೆರಿಟ್ ಮೂಲಕ ವಿದ್ಯಾರ್ಥಿಗಳನ್ನು ಕೌನ್ಸೆಲಿಂಗ್ ಮಾಡಿ ದಾಖಲಾತಿ ಮಾಡಿಕೊಳ್ಳಲಾಗುವುದು ಎಂದು ಶಾಲೆಯ ಕುರುಗೋಡು ಪಶ್ಚಿಮ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಆ.11 ಮತ್ತು 12 ರಂದು ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ದಾಖಲಾತಿ ಹಾಗೂ ಆ.13 ಮತ್ತು 14 ರಂದು ಮೀಸಲಾತಿ ವರ್ಗದ ದಾಖಲಾತಿ ಪ್ರಕ್ರಿಯೆ ನಡೆಯಲಿದೆ.
ಈಗಾಗಲೇ 1:30 ರ ಅನುಪಾತದ ಅರ್ಹ ಮಕ್ಕಳ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.
ಬೇಕಾದ ದಾಖಲೆ:
ಪ್ರವೇಶಾತಿ ಅರ್ಜಿ, ವರ್ಗಾವಣೆ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಥಿಯ ಆಧಾರ್ ಕಾರ್ಡ್, ವಿದ್ಯಾರ್ಥಿಯ ಬ್ಯಾಂಕ್‍ಪಾಸ್ ಪುಸ್ತಕ, ತಂದೆ-ತಾಯಿಯ ಆಧಾರ್ ಕಾರ್ಡ್ ಪ್ರತಿ, ಅಂಗವಿಕಲ ವಿದ್ಯಾರ್ಥಿಯಾಗಿದ್ದಲ್ಲಿ ವೈದ್ಯಕೀಯ ಪ್ರಮಾಣ ಪತ್ರ, ವಿದ್ಯಾರ್ಥಿಯ 4 ಭಾವಚಿತ್ರ, ಬೇರೆ ತಾಲ್ಲೂಕಿನ ವಿದ್ಯಾರ್ಥಿಗಳಾಗಿದ್ದಲ್ಲಿ ತಹಶೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ, 5ನೇ ತರಗತಿಯ ಮೂಲ ಅಂಕಪಟ್ಟಿಯ 2 ಜೆರಾಕ್ಸ್, ಪ್ರವೇಶ ಪರೀಕ್ಷೆಯ ಹಾಲ್ ಟಿಕೆಟ್, ವಿದ್ಯಾರ್ಥಿಯ ಆರೋಗ್ಯ ಕಾರ್ಡ್, ಪಾಲಕರ ಮೊಬೈಲ್ ಸಂಖ್ಯೆ, ಪಡಿತರ ಪುಸ್ತಕದ ಜೆರಾಕ್ಸ್ ಪ್ರತಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್