ಧಾರವಾಡ, 02 ಆಗಸ್ಟ್ (ಹಿ.ಸ.) :
ಆ್ಯಂಕರ್ : ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮತ್ತು ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು, ಇಲ್ಲಿಯವರೆಗೆ 2.81 ಲಕ್ಷ ಹೆಕ್ಟೆರ್ ಪ್ರದೇಶದ ಬಿತ್ತನೆ ಗುರಿಗೆ 2.91 ಲಕ್ಷ ಹೆಕ್ಟರ್ ಪ್ರದೇಶ (ಶೇ. 103.46ದಲ್ಲಿ) ಬಿತ್ತನೆಯಾಗಿದೆ. ಸಮಪರ್ಕವಾಗಿ ಬಿತ್ತನೆ ಬೀಜ, ರಸಗೊಬ್ಬರಗಳನ್ನು ರೈತರಿಗೆ ವಿತರಿಸಲಾಗಿದೆ. ಜಿಲ್ಲೆಯಲ್ಲಿ ನ್ಯಾನೊ ರಸಗೊಬ್ಬರ ಬಳಕೆ ವರ್ಷದಿಂದ ವರ್ಷಕ್ಕೆ
ಹೆಚ್ಚುತ್ತಿದ್ದು, ಮತ್ತು ಇದು ರೈತ ಸ್ನೇಹಿಯಾಗಿದ್ದು, ಕಾಳುಗೊಬ್ಬರವನ್ನು ಮಿತವಾಗಿ ಬಳಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಕೃಷಿ ಇಲಾಖೆ ವತಿಯಿಂದ ಧಾರವಾಡ ತಾಲೂಕಿನ ಮರೆವಾಡ ಗ್ರಾಮದ ರೈತ ರಾಯಣ್ಣ ಹುರಳಿ ಅವರ ತೋಟದಲ್ಲಿ ಬೆಳೆಗಳಿಗೆ ನ್ಯಾನೋ ಯೂರಿಯಾ ರಸಗೊಬ್ಬರ ಸಿಂಪಡಣೆ ಪ್ರಾತ್ಯಕ್ಷಿಕೆ ಮತ್ತು ಬೆಳೆ ಸಮೀಕ್ಷೆಯ ಪ್ರಾತ್ಯಕ್ಷಿಕೆಯನ್ನು ರೈತರೊಂದಿಗೆ ಪರಿಶೀಲಿಸಿದ ನಂತರ ಮಾತನಾಡಿದರು.
ಮಣ್ಣಿನ ರಸವತ್ತಿತೆ ಹಾಗೂ ಫಲವತ್ತತೆ ಹಾಳಾಗದಂತೆ ಗೊಬ್ಬರಗಳನ್ನು ಬೆಳೆಗಳಿಗೆ ಬಳಸಬೇಕು. ಅನಗತ್ಯವಾಗಿ ಹೆಚ್ಚುವರಿ ರಸಗೊಬ್ಬರಗಳನ್ನು, ರಾಸಾಯನಿಕಗಳನ್ನು ಬೆಳೆಗಳಿಗೆ, ಭೂಮಿಗೆ ಬಳಸುವದರಿಂದ ಆಹಾರ, ವಾತಾವರಣ ಮತ್ತು ಜಲ ಮಲೀನವಾಗುತ್ತದೆ. ಬೆಳೆಗಳಿಗೆ ಅಗತ್ಯಕ್ಕೆ ಅನುಗುಣವಾಗಿ ನ್ಯಾನೊ ರಸಗೊಬ್ಬರ ಬಳಸುವದರಿಂದ ಪರಿಸರ ಮಾಲಿನ್ಯ ಮತ್ತು ಹೆಚ್ಚು ಖರ್ಚನ್ನು ತಡೆಯಬಹುದಾಗಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa