ಹಾಸನ, 2 ಆಗಸ್ಟ್ (ಹಿ.ಸ.):
ಆ್ಯಂಕರ್:ಕರ್ನಾಟಕ ಮಾಧ್ಯಮ ಅಕಾಡೆಮಿಯು ಪತ್ರಕರ್ತರಿಗೆ ನೀಡುವ ಫೆಲೋಷಿಪ್‌ಗಳಿಗಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಆಗಸ್ಟ್ 8, 2025ರವರೆಗೆ ವಿಸ್ತರಿಸಿದೆ.
ಅಕಾಡೆಮಿಯ ಸಾಮಾನ್ಯ ಆಯವ್ಯಯದಲ್ಲಿ 2, ಮಹಿಳಾ ಆಯವ್ಯಯದಲ್ಲಿ 2, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಗಳಡಿಯಲ್ಲಿ ತಲಾ ಒಂದು ಎಂಬಂತೆ ಒಟ್ಟು 6 ಫೆಲೋಷಿಪ್‌ಗಳನ್ನು ನೀಡಲಾಗುತ್ತಿದೆ. ಫೆಲೋಷಿಪ್ ಅವಧಿ ಆರು ತಿಂಗಳು.
ಅರ್ಹತೆ: ಕನಿಷ್ಠ 5 ವರ್ಷ ಪತ್ರಿಕೋದ್ಯಮ ಅನುಭವ ಹೊಂದಿರುವ, 30 ರಿಂದ 50 ವರ್ಷದ ವಯೋಮಿತಿಯ ಪದವೀಧರ ಪತ್ರಕರ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಪತ್ರಕರ್ತರು ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಪತ್ರಿಕಾ ಪಟ್ಟಿಯಲ್ಲಿರುವ ಮುದ್ರಣ ಮಾಧ್ಯಮಗಳು ಅಥವಾ ಉಪಗ್ರಹ ವಾಹಿನಿಗಳಲ್ಲಿ ಕಾರ್ಯನಿರ್ವಹಿಸುತ್ತಿರಬೇಕು. ಸಂಪಾದಕರ ದೃಢೀಕರಣ ಪತ್ರ ನೀಡುವುದು ಕಡ್ಡಾಯವಾಗಿದೆ.
ಅರ್ಜಿ ನಮೂನೆಗೆ ಅಕಾಡೆಮಿಯ ವೆಬ್‌ಸೈಟ್ mediaacademy.karnataka.gov.in ನಲ್ಲಿ ಲಭ್ಯವಿದ್ದು, ಭರ್ತಿ ಮಾಡಿದ ಅರ್ಜಿಯನ್ನು ಪೂರಕ ದಾಖಲೆಗಳು ಹಾಗೂ ಅಧ್ಯಯನ ಟಿಪ್ಪಣಿಯೊಂದಿಗೆ ಅಕಾಡೆಮಿಗೆ ಡಾಕು ಅಥವಾ kmafellowship2025@gmail.com ಗೆ ಇ-ಮೇಲ್ ಮೂಲಕ ಕಳುಹಿಸಬಹುದು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa