ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅರ್ಜಿ ಆಹ್ವಾನ
ಹಾಸನ, 2 ಆಗಸ್ಟ್ (ಹಿ.ಸ.): ಆ್ಯಂಕರ್: ಚಾಮರಾಜೇಂದ್ರ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಂಡಿರುವ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ), ಸಿದ್ದಾರ್ಥನಗರ, ಮೈಸೂರು ಸಂಸ್ಥೆಯಲ್ಲಿ ಪ್ರಥಮ ಬಿ.ವಿ.ಎ. ಸ್ನಾತಕ ಪದವಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಮಾಸ್ಟರ್ ಆಫ್ ವಿಜ್ಯುಯಲ್ ಆಟ್ಸ್ (ಎಂ.ವಿ
ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅರ್ಜಿ ಆಹ್ವಾನ


ಹಾಸನ, 2 ಆಗಸ್ಟ್ (ಹಿ.ಸ.):

ಆ್ಯಂಕರ್:

ಚಾಮರಾಜೇಂದ್ರ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಂಡಿರುವ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ), ಸಿದ್ದಾರ್ಥನಗರ, ಮೈಸೂರು ಸಂಸ್ಥೆಯಲ್ಲಿ ಪ್ರಥಮ ಬಿ.ವಿ.ಎ. ಸ್ನಾತಕ ಪದವಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಮಾಸ್ಟರ್ ಆಫ್ ವಿಜ್ಯುಯಲ್ ಆಟ್ಸ್ (ಎಂ.ವಿ.ಎ)[ಎರಡು ಶೈಕ್ಷಣಿಕ ವರ್ಷದ ನಾಲ್ಕು ಸೆಮಿಸ್ಟರ್ ಸಿ.ಬಿ.ಸಿ.ಎಸ್ ಪದ್ದತಿ] ದೃಶ್ಯ ಕಲೆಯಲ್ಲಿ 2025-26 ನೇ ಶೈಕ್ಷಣಿಕ ಸಾಲಿಗೆ ಪ್ರಥಮ ಸ್ನಾತಕೋತ್ತರ ಪದವಿ ಪ್ರವೇಶಾತಿಗಾಗಿ“UUCMS PORTAL ಮೂಲಕ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಸದರಿ ಸ್ನಾತಕೋತ್ತರ ಪದವಿಯಲ್ಲಿ ಚಿತ್ರಕಲೆ ಮತ್ತು ಶಿಲ್ಪಕಲೆ ವಿಭಾಗಳಲ್ಲಿ ವಿಶೇಷ ಅಧ್ಯಯನದ ಸ್ನಾತಕೋತ್ತರ ಪದವಿಯಾಗಿರುತ್ತದೆ. ಪ್ರಥಮ ಮಾಸ್ಟರ್ ಆಫ್ ವಿಜ್ಯುಯಲ್ ಆರ್ಟ್ಸ್ (ಎಂ.ವಿ.ಎ), ಪ್ರವೇಶಾತಿಗಾಗಿ ಚಿತ್ರಕಲೆ ಮತ್ತು ಶಿಲ್ಪಕಲೆ ವಿಭಾಗಕ್ಕೆ ಅರ್ಜಿ ಸಲ್ಲಿಸಲು ಆ.7 ರಂದು ಅಂತಿಮ ದಿನಾಂಕವಾಗಿದ್ದು, ಆ.11 ರಂದು ಬೆಳಗ್ಗೆ 11 ಗಂಟೆಗೆ ಅರ್ಹತಾ ಪರೀಕ್ಷೆ ಹಾಗೂ ಮಧ್ಯಾಹ್ನ 02 ಗಂಟೆಗೆ ವಯಕ್ತಿಕ ಸಂದರ್ಶನ ಇರುತ್ತದೆ. ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಅಂತರ್ಜಾಲ ವಿಳಾಸ http://www.mysore.nic.in ಮತ್ತು http://www.cavamysore.karnataka.gov.in ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಕಾರ್ಯಾಲಯದ ದೂರವಾಣಿ ಸಂಖ್ಯೆ 0821-2438931 ಸಂಪರ್ಕಿಸಲು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ ಡೀನ್ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande