ದೆಹಲಿ-ಎನ್‌ಸಿಆರ್‌ನಲ್ಲಿ ಹೆದ್ದಾರಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
ನವದೆಹಲಿ, 17 ಆಗಸ್ಟ್ (ಹಿ.ಸ.) : ಆ್ಯಂಕರ್ :ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ₹11 ಸಾವಿರ ಕೋಟಿ ವೆಚ್ಚದ ದ್ವಾರಕಾ ಎಕ್ಸ್‌ಪ್ರೆಸ್‌ವೇ ಮತ್ತು ನಗರ ವಿಸ್ತರಣಾ ರಸ್ತೆ-2 ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12:ಕ್ಕೆ ರೋಹಿಣಿಯಲ್ಲಿ ನಡೆಯುವ ಕಾರ್ಯಕ್ರಮದ
Pm


ನವದೆಹಲಿ, 17 ಆಗಸ್ಟ್ (ಹಿ.ಸ.) :

ಆ್ಯಂಕರ್ :ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ₹11 ಸಾವಿರ ಕೋಟಿ ವೆಚ್ಚದ ದ್ವಾರಕಾ ಎಕ್ಸ್‌ಪ್ರೆಸ್‌ವೇ ಮತ್ತು ನಗರ ವಿಸ್ತರಣಾ ರಸ್ತೆ-2 ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12:ಕ್ಕೆ ರೋಹಿಣಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ಯೋಜನೆಗಳಿಂದ ದೆಹಲಿಯ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಐಜಿಐ ವಿಮಾನ ನಿಲ್ದಾಣವನ್ನು ಕೇವಲ 40 ನಿಮಿಷಗಳಲ್ಲಿ ತಲುಪುವ ಅವಕಾಶ ಸಿಗಲಿದೆ. ಜೊತೆಗೆ ಎನ್ ಸಿಆರ್–ಚಂಡೀಗಢ ಪ್ರಯಾಣ ಸುಲಭಗೊಳ್ಳಲಿದ್ದು, ಅಲಿಪುರ–ದಿಘಾವ್ ಕಲಾನ್–ಬಹದ್ದೂರ್‌ಗಢ–ಸೋನಿಪತ್ ಸಂಪರ್ಕ ಮಾರ್ಗವೂ ಆರಂಭಗೊಳ್ಳಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande