ಮುಂಬಯಿ 18 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮಹಾರಾಷ್ಟ್ರದ ಅಹಲ್ಯಾನಗರದ ನೆವಾಸ ಫಾಟಾದ ಪೀಠೋಪಕರಣ ಅಂಗಡಿಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ಐವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಕಳೆದ ರಾತ್ರಿ 1 ಗಂಟೆ ಸುಮಾರಿಗೆ ಮಯೂರ್ ಫರ್ನಿಚರ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಂಗಡಿಯಲ್ಲಿ ಸುಡುವ ವಸ್ತುಗಳು ಹೆಚ್ಚಿದ್ದರಿಂದ ಅಗ್ನಿ ತೀವ್ರವಾಗಿ ಹರಡಿತು. ಅಂಗಡಿಯಲ್ಲಿ ಮಲಗಿದ್ದ ಕುಟುಂಬದವರು ಹೊರಬರಲು ಸಾಧ್ಯವಾಗದೆ ದಹನಗೊಂಡಿದ್ದಾರೆ.
ಮೃತರನ್ನು ಮಯೂರ್ ಅರುಣ್ ರಸನೆ (45), ಪಾಯಲ್ ಮಯೂರ್ ರಸನೆ (38), ಅಂಶ್ (10), ಚೈತನ್ಯ (7) ಮತ್ತು ವೃದ್ಧ ಮಹಿಳೆ ಎಂದು ಗುರುತಿಸಲಾಗಿದೆ.
ಅಗ್ನಿಶಾಮಕ ದಳದ ತಂಡ ಬೆಳಿಗ್ಗೆ ವೇಳೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದು, ಪೊಲೀಸರು ಬೆಂಕಿಯ ಕಾರಣ ಕುರಿತು ತನಿಖೆ ನಡೆಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa