ಉಜ್ಜಯಿನಿ, 18 ಆಗಸ್ಟ್ (ಹಿ.ಸ.) :
ಆ್ಯಂಕರ್ : ಭಾದ್ರ ಮಾಸ ಕೃಷ್ಣಪಕ್ಷ ದಶಮಿಯಂದು ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ಮಹಾಕಾಳೇಶ್ವರ ದೇವಾಲಯದಲ್ಲಿ ಭಸ್ಮಾರತಿ ವೇಳೆ ಭಗವಾನ್ ಮಹಾಕಾಳರಿಗೆ ರಾಜಾ ಸ್ವರೂಪದಲ್ಲಿ ಶೃಂಗಾರ ಮಾಡಲಾಯಿತು.
ಜಟಾಧಾರಿ ಮಹಾಕಾಳರಿಗೆ ಭಾಂಗ್, ರಜತ ಚಂದ್ರಮೂಕುಟ, ರುದ್ರಾಕ್ಷ ಮಾಲೆ ಅರ್ಪಿಸಲಾಯಿತು. ಸಾವಿರಾರು ಭಕ್ತರು ದಿವ್ಯ ದರ್ಶನ ಪಡೆದರು.
ಸಂಜೆ ಆರನೆಯ ಮತ್ತು ಅಂತಿಮ ಶಾಹಿ ಸವಾರಿ ಭವ್ಯವಾಗಿ ನಡೆಯಲಿದೆ.
ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಹಾಗೂ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಪಾಲ್ಗೊಳ್ಳಲಿದ್ದಾರೆ.
ಏಳು ಕಿಮೀ ಉದ್ದದ ಸವಾರಿ ಮಾರ್ಗದಲ್ಲಿ ಡ್ರೋನ್ ಮೂಲಕ ಪುಷ್ಪವೃಷ್ಠಿ ವ್ಯವಸ್ಥೆ ಮಾಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa