ಶಿಮ್ಲಾ, 17 ಆಗಸ್ಟ್ (ಹಿ.ಸ.) :
ಆ್ಯಂಕರ್ : ಹಿಮಾಚಲ ಪ್ರದೇಶದಲ್ಲಿ ನಿರಂತರ ಮಳೆಯಿಂದ ಮಂಡಿ ಮತ್ತು ಕುಲ್ಲು ಜಿಲ್ಲೆಗಳಲ್ಲಿ ಹಠಾತ್ ಪ್ರವಾಹ ಉಂಟಾಗಿ ಭಾರೀ ಹಾನಿಯಾಗಿದೆ.
ಪನಾರ್ಸಾ, ಟಕೋಲಿ, ನಾಗವಾಯಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮನೆ-ಅಂಗಡಿಗಳು ಹಾನಿಗೊಳಗಾಗಿದ್ದು, ಮಂಡಿ-ಕುಲ್ಲು ರಾಷ್ಟ್ರೀಯ ಹೆದ್ದಾರಿ ಮುಚ್ಚಲ್ಪಟ್ಟಿದೆ.
ಕುಲ್ಲುವಿನ ದೊಹರಾನಾಲಾ, ಪಿರ್ಡಿ ಹಾಗೂ ಭುಂತರ್ ಪ್ರದೇಶಗಳಲ್ಲಿ ರಸ್ತೆ ಮುಚ್ಚಿ, ವಾಹನಗಳು ಕೊಚ್ಚಿಹೋಗಿವೆ. ಕಿನ್ನೌರ್‌ನಲ್ಲೂ ರಾಷ್ಟ್ರೀಯ ಹೆದ್ದಾರಿ-5 ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಇದೇ ವೇಳೆ ಸಟ್ಲೆಜ್ ನದಿ ಸವೆತದಿಂದ ಶಿಮ್ಲಾ-ಮಂಡಿ ರಸ್ತೆ ಕುಸಿದು ಅಪಾಯ ಹೆಚ್ಚಾಗಿದೆ. ಹವಾಮಾನ ಇಲಾಖೆ 19ರ ತನಕ ಭಾರೀ ಮಳೆಯ ಹಳದಿ ಎಚ್ಚರಿಕೆ ನೀಡಿದ್ದು, ಜನರಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa