ಗದಗ, 16 ಆಗಸ್ಟ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಧರ್ಮಸ್ಥಳ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಧರ್ಮಸ್ಥಳ ಕ್ಷೇತ್ರದ ಪೀಠಕ್ಕೆ ತಮ್ಮಿಗಿರುವ ಗೌರವವನ್ನು ವ್ಯಕ್ತಪಡಿಸಿದ್ದಾರೆ.
“ನಾವು ಶಿವನ ಸ್ವರೂಪದಲ್ಲಿ ಮಂಜುನಾಥನನ್ನು ದಿನನಿತ್ಯ ನೆನೆಯುತ್ತೇವೆ. ಧರ್ಮಸ್ಥಳ ಪೀಠದ ಬಗ್ಗೆ ನಮಗೆ ಅಪಾರ ಗೌರವವಿದೆ,” ಎಂದು ಅವರು ತಿಳಿಸಿದರು.
ತನಿಖೆ ವಿಚಾರವಾಗಿ ಮಾತನಾಡಿದ ಪಾಟೀಲ್, ದೂರು ಬಂದ ಬಳಿಕ ಸರ್ಕಾರ ತನಿಖೆ ಆರಂಭಿಸಿರುವುದಾಗಿ, ಪ್ರಾರಂಭದಲ್ಲಿ ವಿರೋಧಿಸಿದ್ದವರೇ ಎಸ್‌ಐಟಿ ತನಿಖೆಗೆ ಸ್ವಾಗತಿಸಿದ್ದರೆಂದು ಹೇಳಿದರು.
“ಸಿಎಲ್‌ಪಿ ಸಭೆಯಲ್ಲಿ ಬಹುತೇಕ ಎಲ್ಲ ಸದಸ್ಯರು ತನಿಖೆ ಬೇಗ ಮುಗಿಯಲಿ ಎಂದು ಒತ್ತಾಯಿಸಿದ್ದಾರೆ. ಅಲ್ಲಿ ಏನೂ ಸಿಕ್ಕಿಲ್ಲ, ಹಾಗಾಗಿ ವಿಷಯವನ್ನು ಮುಗಿಸಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ,” ಎಂದು ತಿಳಿಸಿದರು.
ಬಿಜೆಪಿಯ “ಧರ್ಮಸ್ಥಳ ಚಲೋ” ಕರೆಗೆ ತೀವ್ರ ಟೀಕೆ ಮಾಡಿದ ಪಾಟೀಲ್, “ಅವರಿಗೆ ಬೇರೆ ಉದ್ಯೋಗವಿಲ್ಲ. ಮೊದಲೇ ತನಿಖೆಗೆ ವಿರೋಧಿಸಬೇಕಿತ್ತು. ಈಗ ಹಿಂದುತ್ವದ ವಿಚಾರಗಳನ್ನು ಮುಂದಿಟ್ಟುಕೊಂಡು ಕೋಮುಸೌಹಾರ್ದತೆಯನ್ನು ಹಾಳುಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅದರಿಂದ ಲಾಭ ಪಡೆಯುವುದು ಬಿಜೆಪಿ ಉದ್ದೇಶ,” ಎಂದು ಆರೋಪಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP