ಅಮೃತ್ ಉದ್ಯಾನದಲ್ಲಿ ಮೂರು ಹೊಸ ಆಕರ್ಷಣೆ ತಾಣಗಳ ಉದ್ಘಾಟನೆ
ನವದೆಹಲಿ, 16 ಆಗಸ್ಟ್ (ಹಿ.ಸ.) : ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿರುವ ಅಮೃತ್ ಉದ್ಯಾನದಲ್ಲಿ ಪ್ಲುಮೆರಿಯಾ ಗಾರ್ಡನ್, ಬನ್ಯನ್ ಗ್ರೋವ್ ಮತ್ತು ಬಾಬ್ಲಿಂಗ್ ಬ್ರೂಕ್ ಎಂಬ ಮೂರು ಹೊಸ ತಾಣಗಳನ್ನು ಉದ್ಘಾಟಿಸಿದರು. ಪ್ಲುಮೆರಿಯಾ ಗಾರ್ಡನ್‌ನ್ನು ಸುಂದರ ಹುಲ್ಲಿನ ಬೆಟ್ಟ
President


ನವದೆಹಲಿ, 16 ಆಗಸ್ಟ್ (ಹಿ.ಸ.) :

ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿರುವ ಅಮೃತ್ ಉದ್ಯಾನದಲ್ಲಿ ಪ್ಲುಮೆರಿಯಾ ಗಾರ್ಡನ್, ಬನ್ಯನ್ ಗ್ರೋವ್ ಮತ್ತು ಬಾಬ್ಲಿಂಗ್ ಬ್ರೂಕ್ ಎಂಬ ಮೂರು ಹೊಸ ತಾಣಗಳನ್ನು ಉದ್ಘಾಟಿಸಿದರು.

ಪ್ಲುಮೆರಿಯಾ ಗಾರ್ಡನ್‌ನ್ನು ಸುಂದರ ಹುಲ್ಲಿನ ಬೆಟ್ಟಗಳು ಹಾಗೂ ಸಸ್ಯ ಹಾಸಿಗೆಗಳಿಂದ ವಿನ್ಯಾಸಗೊಳಿಸಲಾಗಿದ್ದು, ಬನ್ಯನ್ ಗ್ರೋವ್‌ನಲ್ಲಿ ರಿಫ್ಲೆಕ್ಸಾಲಜಿ ಮಾರ್ಗ ಮತ್ತು ಧ್ಯಾನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಬಾಬ್ಲಿಂಗ್ ಬ್ರೂಕ್‌ನಲ್ಲಿ ಜಲಪಾತ, ಹೊಳೆ ಮತ್ತು ಕಲ್ಲಿನ ಮಾರ್ಗಗಳನ್ನು ನಿರ್ಮಿಸಲಾಗಿದೆ.

ಈ ತಾಣಗಳು ಈಗ ಅಮೃತ್ ಉದ್ಯಾನದ ಭಾಗವಾಗಿದ್ದು, ಸೆಪ್ಟೆಂಬರ್ 14ರವರೆಗೆ ಸಾರ್ವಜನಿಕ ವೀಕ್ಷಣೆಗೆ ಮುಕ್ತ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande