ವಿಜಯಪುರ, 16 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ದೇಶಪ್ರೇಮ, ಹೋರಾಟದ ಕಿಚ್ಚು ಸದಾ ಆದರ್ಶವಾಗಿವೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟನೆ ಮತ್ತು ಬಬಲೇಶ್ವರ ತಾಲೂಕಿನ ಕಾಖಂಡಕಿ ಬಳಿಯ ಅಗಸನಹಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣನವರ 229ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಂಗೊಳ್ಳಿ ರಾಯಣ್ಣ ನಾಡಿನ ಏಕತೆ ಮತ್ತು ಸ್ವಾಭಿಮಾನದ ಶಾಶ್ವತ ಸಂಕೇತ. ಕಿತ್ತೂರು ಸಂಸ್ಥಾನವನ್ನು ಕಾಪಾಡುವಲ್ಲಿ ಸಂಗೊಳ್ಳಿ ರಾಯಣ್ಣವರು ರಾಣಿ ಚೆನ್ನಮ್ಮನವರ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದರು. ಅವರ ಶೌರ್ಯ ಮತ್ತು ದೇಶಭಕ್ತಿಯ ಸಂದೇಶಗಳು ಮುಂದಿನ ಪೀಳಿಗೆಗಳಿಗೆ ಪ್ರೇರಣೆ ಮತ್ತು ಆದರ್ಶವಾಗಿವೆ. ಅವರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸಲಾಗದು. ಅವರು ಎಲ್ಲರ ಹೃದಯದಲ್ಲೂ ನೆಲೆಸಿರುವ ನಾಡಿನ ವೀರಪುತ್ರರಾಗಿದ್ದಾರೆ. ರಾಯಣ್ಣನವರ ವ್ಯಕ್ತಿತ್ವ ಹಾಗೂ ಆದರ್ಶಗಳು ಎಲ್ಲಾ ಸಮುದಾಯಗಳಿಗೂ, ಎಲ್ಲ ಕಾಲಕ್ಕೂ ಮಾರ್ಗದರ್ಶಿಯಾಗಿದೆ ಎಂದು ಸಚಿವರು ಹೇಳಿದರು.
ರತ್ನಾಪುರ ಗ್ರಾಮದ ಕಾರ್ಯಕ್ರಮದಲ್ಲಿ ಮದಕೊಂಡ ಮಹಾರಾಜರು, ಹುಲಜಂತಿ ಮಾಳಿಂಗರಾಯರು, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಜಕ್ಕಪ್ಪ ಯಡವೆ, ಆರ್. ಜಿ. ಯರನಾಳ, ರಾಜು ಕಂಬೋಗಿ, ರವಿ ಬಿದರಿ, ಲೇಪು ಕೊಣ್ಣೂರ, ರಾಮಜಿ ಮೀಸಾಳ, ಈಶ್ವರ ದಳವಾಯಿ, ಚಂದ್ರಕಾಂತ ಒಡೆಯರ ಅಗಸನಹಳ್ಳಿ ಗ್ರಾಮದ ಕಾರ್ಯಕ್ರಮದಲ್ಲಿ ಮುಖಂಡರಾದ ರಾಮನಗೌಡ ಪಾಟೀಲ, ಪ್ರಕಾಶಗೌಡ ಪಾಟೀಲ, ಸೋಮು ಹಿರೇಕುರಬರ, ಮಲ್ಲು ಪರಸಣ್ಣವರ, ಅಲ್ಲಿಸಾಬ ಖಡಕೆ, ಪ್ರಕಾಶ ಹೂಗಾರಕರ, ಸುರೇಶ ಸೀತಿಮನಿ, ಬೀಮಶಿ ತಳೇವಾಡ, ಮಲ್ಲು ಹಿರೇಕುರಬರ, ಚಾಂದಸಾಬ ಇನಮದಾರ, ಮಾಳಪ್ಪ ಸಿದ್ನಾತ, ಶೇಖು ಲೆಂಕಪ್ಪಗೋಳ ಮಂತಾದವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande