100 ಕೋಟಿ ಮೌಲ್ಯದ ಆಭರಣಗಳಿಂದ ರಾಧಾ-ಕೃಷ್ಣ ಅಲಂಕಾರ
ಗ್ವಾಲಿಯರ್, 16 ಆಗಸ್ಟ್ (ಹಿ.ಸ.) : ಆ್ಯಂಕರ್ : ದೇಶದಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಭಕ್ತಿ-ಭಾವನೆಯೊಂದಿಗೆ ಆಚರಿಸಲಾಗುತ್ತಿರುವ ಬೆನ್ನಲ್ಲೇ, ಮಧ್ಯಪ್ರದೇಶದ ಗ್ವಾಲಿಯರ್‌ನ ಐತಿಹಾಸಿಕ ಗೋಪಾಲ್ ಮಂದಿರ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಜನ್ಮಾಷ್ಟಮಿ ದಿನ ರಾಧಾ-ಕೃಷ್ಣರಿಗೆ 100 ಕೋಟಿ ರೂ. ಮೌಲ
Decoration


ಗ್ವಾಲಿಯರ್, 16 ಆಗಸ್ಟ್ (ಹಿ.ಸ.) :

ಆ್ಯಂಕರ್ : ದೇಶದಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಭಕ್ತಿ-ಭಾವನೆಯೊಂದಿಗೆ ಆಚರಿಸಲಾಗುತ್ತಿರುವ ಬೆನ್ನಲ್ಲೇ, ಮಧ್ಯಪ್ರದೇಶದ ಗ್ವಾಲಿಯರ್‌ನ ಐತಿಹಾಸಿಕ ಗೋಪಾಲ್ ಮಂದಿರ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಜನ್ಮಾಷ್ಟಮಿ ದಿನ ರಾಧಾ-ಕೃಷ್ಣರಿಗೆ 100 ಕೋಟಿ ರೂ. ಮೌಲ್ಯದ ಚಿನ್ನ, ವಜ್ರ, ಪಚ್ಚೆ, ಮಾಣಿಕ್ಯ ಮತ್ತು ಅಮೂಲ್ಯ ರತ್ನಗಳಿಂದ ಅಲಂಕರಿಸಿದ ಆಭರಣಗಳಿಂದ ವಿಶೇಷ ಶೃಂಗಾರ ಮಾಡಲಾಗುತ್ತಿದೆ.

ಸಿಂಧಿಯಾ ರಾಜವಂಶದ ಐತಿಹಾಸಿಕ ಪರಂಪರೆಯಾದ ಈ ಮಂದಿರದ ಅಲಂಕಾರದಲ್ಲಿ ನವಿಲು ಕಿರೀಟ, ವೈಜಯಂತಿ ಹಾರ, ರತ್ನಖಚಿತ ಕಂಗಣ, ಉಂಗುರ, ಕಾಲುಂಗುರ ಸೇರಿದಂತೆ ಅನೇಕ ಅಮೂಲ್ಯ ಆಭರಣಗಳಿವೆ. ಬಹುತೇಕ ಆಭರಣಗಳು ಸಿಂಧಿಯಾ ಕುಟುಂಬದ ನಿಧಿಯ ಭಾಗವಾಗಿದ್ದು, ವರ್ಷದಲ್ಲಿ ಕೆಲವೇ ದಿನಗಳಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ.

ಮಹಾರಾಣಿ ಬಯಾಜಾಬಾಯಿ ಸ್ಥಾಪಿಸಿದ ಈ ದೇವಾಲಯದಲ್ಲಿ ಜನ್ಮಾಷ್ಟಮಿಯಂದು ಮಧ್ಯರಾತ್ರಿ 12:04 ರಿಂದ 12:45ರ ನಡುವೆ ಶ್ರೀಕೃಷ್ಣ ಜನ್ಮೋತ್ಸವ ನೆರವೇರಲಿದೆ. ಭಕ್ತರ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಪಂಚಾಮೃತ, ಮಖನ್-ಮಿಶ್ರಿ ಹಾಗೂ ಪ್ರಸಾದ ವಿತರಿಸಲಾಗುತ್ತದೆ.

ಈ ಭವ್ಯ ಅಲಂಕಾರ ಧಾರ್ಮಿಕದಷ್ಟೇ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದ್ದು, ಗ್ವಾಲಿಯರ್ ಜನತೆಗೆ ಹೆಮ್ಮೆ ಉಂಟುಮಾಡುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande