ನವದೆಹಲಿ, 16 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೆಹಲಿಯ ರೋಹಿಣಿಯಲ್ಲಿ ₹11 ಸಾವಿರ ಕೋಟಿ ಮೌಲ್ಯದ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಇದರಲ್ಲಿ ದ್ವಾರಕಾ ಎಕ್ಸ್‌ಪ್ರೆಸ್‌ವೇ – ದೆಹಲಿ ವಿಭಾಗ ಮತ್ತು ನಗರ ವಿಸ್ತರಣಾ ರಸ್ತೆಗಳು ಸೇರಿವೆ.
ಈ ಯೋಜನೆಗಳಿಂದ ದೆಹಲಿಯ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಎನ್ ಸಿಆರ್ ಪ್ರದೇಶದಲ್ಲಿ ಬಹು-ಮಾದರಿ ಸಂಪರ್ಕ ಹೆಚ್ಚಳ, ಕೈಗಾರಿಕಾ ಪ್ರದೇಶಗಳಿಗೆ ಸುಗಮ ಸಂಪರ್ಕ ಮತ್ತು ಸರಕು ಸಾಗಣೆ ವೇಗ ಹೆಚ್ಚಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa