ನವದೆಹಲಿ, 16 ಆಗಸ್ಟ್ (ಹಿ.ಸ.) :
ಆ್ಯಂಕರ್ : ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಮೊಹಮ್ಮದ್ ದಿಲ್ಶಾದ್ ನನ್ನು ಸಿಬಿಐ ಬಂಧಿಸಿದೆ.
1999ರಲ್ಲಿ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ಈತ ತಲೆಮರೆಸಿಕೊಂಡಿದ್ದ.
ಹತ್ಯೆಯ ಬಳಿಕ ಭಾರತಕ್ಕೆ ಆಗಮಿಸಿ ಗುರುತು ಮರೆ ಮಾಚಿ ವಾಸಿಸುತ್ತಿದ್ದ ದಿಲ್ಶಾದ್, ನಕಲಿ ಪಾಸ್‌ಪೋರ್ಟ್ ಬಳಸಿ ಹಲವು ದೇಶಗಳಿಗೆ ಸಂಚರಿಸುತ್ತಿದ್ದ.
ಸಿಬಿಐ ತಾಂತ್ರಿಕ ಕಣ್ಗಾವಲು ಹಾಗೂ ಗುಪ್ತಚರ ಮಾಹಿತಿಯ ಆಧಾರದಲ್ಲಿ ಆತನ ನಕಲಿ ಗುರುತು ಪತ್ತೆ ಹಚ್ಚಿ, ಲುಕ್ ಔಟ್ ನೋಟಿಸ್ ಹೊರಡಿಸಿತ್ತು.
ಆಗಸ್ಟ್ 11ರಂದು ಮದೀನಾದಿಂದ ಜೆಡ್ಡಾ ಮೂಲಕ ದೆಹಲಿ ತಲುಪಿದಾಗ ದಿಲ್ಶಾದ್ ನನ್ನು ಬಂಧಿಸಿ, ಆಗಸ್ಟ್ 14ರಂದು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa