ನವದೆಹಲಿ, 16 ಆಗಸ್ಟ್ (ಹಿ.ಸ.) :
ಆ್ಯಂಕರ್ : ಭಾರತ-ಚೀನಾ ಗಡಿ ಸಮಸ್ಯೆಯ ಕುರಿತು ಮಾತುಕತೆಗಾಗಿ ಚೀನಾದ ವಿದೇಶಾಂಗ ಸಚಿವ ಹಾಗೂ ವಿಶೇಷ ಪ್ರತಿನಿಧಿ ವಾಂಗ್ ಯಿ ಅವರು ಆಗಸ್ಟ್ 18 ರಿಂದ 20 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ವಿಶೇಷ ಪ್ರತಿನಿಧಿ ಅಜಿತ್ ದೋವಲ್ ಅವರ ಆಹ್ವಾನದ ಮೇರೆಗೆ ಈ ಭೇಟಿ ನಡೆಯುತ್ತಿದ್ದು, ಇವರಿಬ್ಬರ ನಡುವೆ 24ನೇ ಸುತ್ತಿನ ಮಾತುಕತೆ ನಡೆಯಲಿದೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಮತ್ತು ವಾಂಗ್ ಯಿ ನಡುವೆ ದ್ವಿಪಕ್ಷೀಯ ಸಭೆಯೂ ನಡೆಯಲಿದ್ದು, ಗಡಿ ವಿವಾದ, ಪರಸ್ಪರ ಹಿತಾಸಕ್ತಿಗಳು, ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
ಈ ಸಂವಾದವು ಗಡಿ ವಿವಾದ ಪರಿಹಾರ, ನಂಬಿಕೆ ಪುನಃಸ್ಥಾಪನೆ ಹಾಗೂ ಭಾರತ-ಚೀನಾ ಸಂಬಂಧಗಳನ್ನು ಸಮತೋಲಿತ ದಿಕ್ಕಿನಲ್ಲಿ ಮುಂದಕ್ಕೆ ಕೊಂಡೊಯ್ಯುವ ಅವಕಾಶ ಒದಗಿಸಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa