ನವದೆಹಲಿ, 15 ಆಗಸ್ಟ್ (ಹಿ.ಸ.) :
ಆ್ಯಂಕರ್ : ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ದೀಪಾವಳಿಯ ವೇಳೆಗೆ ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಯನ್ನು ಜಾರಿಗೆ ತರಲಾಗುವುದು ಎಂದು ಘೋಷಿಸಿದರು.
ಈ ಕ್ರಮವು ನಾಗರಿಕರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡಿ, ದಿನನಿತ್ಯದ ವಸ್ತುಗಳನ್ನು ಅಗ್ಗವಾಗಿಸುವುದರೊಂದಿಗೆ ಎಂಎಸ್‌ಎಂಇ ವಲಯಕ್ಕೆ ಸಹ ಪ್ರಯೋಜನ ನೀಡಲಿದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ವಿಕಾಸಿತ್ ಭಾರತ್ ರೋಜ್‌ಗಾರ್ ಯೋಜನೆಯನ್ನು ಕೂಡ ಘೋಷಿಸಿದ್ದು. ಇದರಡಿ ಖಾಸಗಿ ವಲಯದಲ್ಲಿ ಮೊದಲ ಉದ್ಯೋಗ ಪಡೆಯುವವರಿಗೆ ಸರ್ಕಾರವು ₹15,000 ಪ್ರೋತ್ಸಾಹಧನ ನೀಡಲಿದೆ ಎಂದರು.
ಆದಾಯ ತೆರಿಗೆ ವ್ಯವಸ್ಥೆಯ ಸರಳೀಕರಣದ ಭಾಗವಾಗಿ, ವಾರ್ಷಿಕ ₹12 ಲಕ್ಷವರೆಗೆ ಆದಾಯ ಹೊಂದಿರುವವರಿಗೆ ತೆರಿಗೆ ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ಈ ಕ್ರಮ ಮಧ್ಯಮ ವರ್ಗ ಹಾಗೂ ಸಂಬಳ ಪಡೆಯುವ ವರ್ಗಕ್ಕೆ ಹೆಚ್ಚಿನ ಪರಿಹಾರ ಒದಗಿಸುತ್ತದೆ ಎಂದು ಮೋದಿ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa