ಕೋಲಾರ ಆಗಸ್ಟ್ ೧೫ (ಹಿ.ಸ) :
ಆ್ಯಂಕರ್ : ಪ್ರತಿಯೊಬ್ಬರು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ದೇಶಾಭಿಮಾನ ಮೆರೆಯುವ ಮೂಲಕ ರಾಷ್ಟçದ ಸರ್ವತೋಮುಖಾಭಿವೃದ್ದಿಗೆ ಪಣ ತೊಡಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಶಿವಾಂಶು ರಜಪೂತ್ ಕರೆ ನೀಡಿದರು.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಶುಕ್ರವಾರದಂದು ೭೯ನೇ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ರಾಷ್ಟ ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶಿವಾಂಶು ರಜಪೂತ್ ಮಾತನಾಡಿ, ಪ್ರತಿಯೊಬ್ಬ ಜನಸಾಮಾನ್ಯರಿಗೂ ದೇಶಾಭಿಮಾನವಿರಬೇಕು, ಶಾಲಾ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ದೇಶದ ಬಗ್ಗೆ ಅಕ್ಕರೆ ಮೂಡಿಸುವ ಕಾರ್ಯವಾಗಬೇಕು, ಎಲ್ಲರೂ ಕೈಗೂಡಿಸಿದ್ದಲ್ಲಿ ದೇಶದ ಸರ್ವತೋಮುಖಾಭಿವೃದ್ದಿ ಸಾಧ್ಯವೆಂದು ಅಭಿಪ್ರಾಯಪಟ್ಟರು.
ರಾಷ್ಟçದ ಸ್ವಾತಂತ್ರಕ್ಕಾಗಿ ಮಹಾತ್ಮರು, ಮಹನೀಯರೆಲ್ಲ ಬಹಳಷ್ಟು ಹೋರಾಡಿದ್ದು, ಅವರನ್ನು ಸ್ಮರಿಸುತ್ತಾ ಪ್ರಸ್ತುತ ಸರ್ಕಾರಿ, ಸರ್ಕಾರೇತರ ಸ್ವಾಮ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ನೈತಿಕ ಬೆಂಬಲದೊ0ದಿಗೆ ಉತ್ತಮ ಬಾಂಧವ್ಯದ ಪರಿಸರದಲ್ಲಿ ಸರ್ಕಾರಿ ಸೇವೆಯನ್ನು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಸಲ್ಲಿಸುವ ನಿಷ್ಠೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಶಿವಾಂಶು ರಜಪೂತ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಎಸ್.ಪಾಂಡುರ0ಗ, ಸಹಾಯಕ ಆಡಳಿತಾಧಿಕಾರಿ ಜಿ.ವಿಶ್ವನಾಥ, ಶಾಖಾಧೀಕ್ಷಕಿ ಎ.ನಜೀಮಾಬಾನು, ಆಪ್ತ ಸಹಾಯಕಿ ಜಿ.ಮಮತಾ, ಪೊಲೀಸ್ ಇನ್ಸ್ಪೆಕ್ಟರ್‌ಗಳಾದ ವೈ.ಆರ್.ರಂಗಶಾಮಯ್ಯ, ಎಸ್.ಟಿ.ಮಾರ್ಕೋಂಡಯ್ಯ, ಪಿ.ಎಂ.ನವೀನ್, ಲಕ್ಷಿನಾರಾಯಣ ಸೇರಿದಂತೆ ಜಿಲ್ಲೆಯ ಎಲ್ಲಾ ಪಿಎಸ್‌ಐಗಳು, ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ, ಲಿಪಿಕ ಸಿಬ್ಬಂದಿ ಭಾಗವಹಿಸಿದ್ದರು.
ಚಿತ್ರ : ಕೆಜಿಎಫ್ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಸ್ವಾತಂತ್ರ ದಿನಾಚರಣೆಯ ಕಾರ್ಯಕ್ರಮದಲ್ಲಿ ಎಸ್ಪಿ ಶಿವಾಂಶು ರಜಪೂತ್, ಡಿವೈಎಸ್ಪಿ ಎಸ್.ಪಾಂಡುರ0ಗ ಇತರರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್