ಭುವನೇಶ್ವರದಲ್ಲಿ ಧ್ವಜಾರೋಹಣ ನೆರವೇರಿಸಿದ ಡಾ.ಮೋಹನ್ ಭಾಗವತ್
ಭುವನೇಶ್ವರ, 15 ಆಗಸ್ಟ್ (ಹಿ.ಸ.) : ಆ್ಯಂಕರ್ : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಒಡಿಶಾದ ಭುವನೇಶ್ವರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಡಾ. ಮೋಹನ್ ಭಾಗವತ್ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು. ಉತ್ಕಲ ವಿಪನ್ನ ಸಹಾಯತ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ
Rss


ಭುವನೇಶ್ವರ, 15 ಆಗಸ್ಟ್ (ಹಿ.ಸ.) :

ಆ್ಯಂಕರ್ : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಒಡಿಶಾದ ಭುವನೇಶ್ವರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಡಾ. ಮೋಹನ್ ಭಾಗವತ್ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು.

ಉತ್ಕಲ ವಿಪನ್ನ ಸಹಾಯತ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತವು ಜಗತ್ತಿಗೆ ಶಾಂತಿ, ಸಂತೋಷ ಮತ್ತು ಧರ್ಮ ನೀಡುವ ವಿಶೇಷ ದೇಶ. ದೇಶದಲ್ಲಿ ಎಲ್ಲರಿಗೂ ಶಾಂತಿ, ಗೌರವ ಹಾಗೂ ಏಕತೆ ಕಲ್ಪಿಸುವುದರೊಂದಿಗೆ, ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ವಿಶ್ವ ನಾಯಕತ್ವ ಸಾಧಿಸಬೇಕು ಎಂದು ಕರೆ ನೀಡಿದರು.

1857ರಿಂದ ಸ್ವಾತಂತ್ರ್ಯ ಹೋರಾಟ ಮುಂದುವರಿದು, ಮೂರು ತಲೆಮಾರುಗಳು ತ್ಯಾಗ ಮತ್ತು ಪರಿಶ್ರಮದಿಂದ ಹೋರಾಡಿದ ಫಲವಾಗಿ 78 ವರ್ಷಗಳ ಹಿಂದೆ ದೇಶ ಸ್ವಾತಂತ್ರ್ಯ ಪಡೆದಿದೆ ಎಂದರು.

ಸ್ವಾತಂತ್ರ್ಯವನ್ನು ಕಾಪಾಡಲು ಮತ್ತು ವಿಸ್ತರಿಸಲು ನಿರಂತರ ಪರಿಶ್ರಮ ಅಗತ್ಯವಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಒಡಿಶಾ (ಪೂರ್ವ) ಪ್ರಾಂತೀಯ ಸಂಘಚಾಲಕ್ ಸಮೀರ್ ಮಹಾಂತಿ ಹಾಗೂ ಸಮಿತಿ ಅಧ್ಯಕ್ಷ ಅಕ್ಷಯ್ ಕುಮಾರ್ ಬಿಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande