ಮೇಘಸ್ಫೋಟ ದುರಂತ : ಮುಂದುವರೆದ ರಕ್ಷಣಾ ಕಾರ್ಯಾಚರಣೆ
ಜಮ್ಮು, 15 ಆಗಸ್ಟ್ (ಹಿ.ಸ.) : ಆ್ಯಂಕರ್ : ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚಶೋತಿ ಗ್ರಾಮದಲ್ಲಿ ಮೇಘಸ್ಫೋಟದಿಂದ ಉಂಟಾದ ಭಾರಿ ಹಾನಿಯ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಲುಪಿದೆ. ಘಟನೆಯಲ್ಲಿ ಇದುವರೆಗೆ 46 ಮಂದಿ ಸಾವನ್ನಪ್ಪಿದ್ದು, 167 ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಿಸಲಾದ
Rescue


ಜಮ್ಮು, 15 ಆಗಸ್ಟ್ (ಹಿ.ಸ.) :

ಆ್ಯಂಕರ್ : ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚಶೋತಿ ಗ್ರಾಮದಲ್ಲಿ ಮೇಘಸ್ಫೋಟದಿಂದ ಉಂಟಾದ ಭಾರಿ ಹಾನಿಯ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಲುಪಿದೆ.

ಘಟನೆಯಲ್ಲಿ ಇದುವರೆಗೆ 46 ಮಂದಿ ಸಾವನ್ನಪ್ಪಿದ್ದು, 167 ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಿಸಲಾದವರಲ್ಲಿ 38 ಮಂದಿಯ ಸ್ಥಿತಿ ಗಂಭೀರವಾಗಿದೆ.

ಕೆಟ್ಟ ಹವಾಮಾನದಿಂದ ಹೆಲಿಕಾಪ್ಟರ್‌ ಕಾರ್ಯಾಚರಣೆ ಸಾಧ್ಯವಾಗದೆ, ತಂಡಗಳು ಉಧಂಪುರದಿಂದ ರಸ್ತೆಮಾರ್ಗವಾಗಿ ಆಗಮಿಸಿವೆ. ಸೇನೆ, ಪೊಲೀಸರು,

ಎಸ್ ಡಿಆರ್ ಎಫ್, ರಾಷ್ಟ್ರೀಯ ರೈಫಲ್ಸ್, ವೈದ್ಯಕೀಯ ತಂಡಗಳು ಹಾಗೂ ಸ್ವಯಂಸೇವಕರು ಸಮನ್ವಯವಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಒಟ್ಟು 300 ಸೈನಿಕರು, 9 ಆಂಬ್ಯುಲೆನ್ಸ್‌ಗಳು ಹಾಗೂ ಅನೇಕ ಸ್ವಯಂಸೇವಕ ತಂಡಗಳು ಸ್ಥಳದಲ್ಲಿವೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಭೀತಿ ವ್ಯಕ್ತವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande