ಆ. 16 ರಂದು ಕಾರಟಗಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ
ಕೊಪ್ಪಳ, 14 ಆಗಸ್ಟ್ (ಹಿ.ಸ.) : ಆ್ಯಂಕರ್ : 2025-26ನೇ ಸಾಲಿನ ಕಾರಟಗಿ ತಾಲೂಕಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಪುರುಷ ಮತ್ತು ಮಹಿಳೆಯರಿಗೆ ಆಗಸ್ಟ್ 16ರಂದು ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಯೊಂದಿಗೆ ಕ್ರೀಡಾಕೂಟವನ್ನು ಕಾರಟಗಿ ನಗರದ ಸಿದ್ದೇಶ್ವರ ರಂಗಮಂದಿರ ಎದುರುಗಡೆಯ ಕರ್ನಾಟ
ಆ. 16 ರಂದು ಕಾರಟಗಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ


ಕೊಪ್ಪಳ, 14 ಆಗಸ್ಟ್ (ಹಿ.ಸ.) :

ಆ್ಯಂಕರ್ : 2025-26ನೇ ಸಾಲಿನ ಕಾರಟಗಿ ತಾಲೂಕಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಪುರುಷ ಮತ್ತು ಮಹಿಳೆಯರಿಗೆ ಆಗಸ್ಟ್ 16ರಂದು ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಯೊಂದಿಗೆ ಕ್ರೀಡಾಕೂಟವನ್ನು ಕಾರಟಗಿ ನಗರದ ಸಿದ್ದೇಶ್ವರ ರಂಗಮಂದಿರ ಎದುರುಗಡೆಯ ಕರ್ನಾಟಕ ಪಬ್ಲಿಕ ಶಾಲೆಯಲ್ಲಿ (ಕೆ.ಪಿ.ಎಸ್) ಏರ್ಪಡಿಸಲಾಗಿದೆ.

ಈ ಕ್ರೀಡಾ ಸ್ಪರ್ಧೆಗಳು ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿರುತ್ತವೆ. ಈ ಕ್ರೀಡಾಕೂಟದಲ್ಲಿ ಸಮವಸ್ತ್ರದಾರಿ ಸೇವೆಗೆ ಸೇರಿದ, ರಕ್ಷಣಾಪಡೆ,ಅರೆ ರಕ್ಷಣಾ ಪಡೆ ಕ್ರೀಡಾಪಟುಗಳು ಭಾಗವಹಿಸಲು ಅರ್ಹರಲ್ಲ. ಸದರಿ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಯಾವ ವಯಸ್ಸಿನ ನಿರ್ಬಂಧವಿಲ್ಲ. ತಾಲೂಕು ಮಟ್ಟದಲ್ಲಿ ನಡೆಯುವ ಕ್ರೀಡೆಗಳಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಹಾಗೂ ಗುಂಪು ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳಿಗೆ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.

ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಈಶಪ್ಪ ಗಾಜಿ (ದೈ.ಶಿ) ಮೊ.ಸಂ: 9535831941, ವಿಠ್ಠಲ್ ಜೀರಗಾಳಿ (ದೈ.ಶಿ) ಮೊ.ಸಂ: 9900299480, ಹಂಪನಗೌಡ (ದೈ.ಶಿ) ಮೊ.ಸಂ: 9481465709, ಯಮನಪ್ಪ (ದೈ.ಶಿ) ಮೊ.ಸಂ: 9591249132, ರವಿನಾಯಕ್ (ದೈ.ಶಿ) ಮೊ.ಸಂ: 9980375462, ಬಸವರಾಜ (ದೈ.ಶಿ) ಮೊ.ಸಂ: 720448286, ಶಿವಕುಮಾರ (ದೈ.ಶಿ) ಮೊ.ಸಂ: 7795574413, ಯಮನೂರಸಾಬ್(ದೈ.ಶಿ) ಮೊ.ಸಂ: 9902792814 ಗೆ ಅಥವಾ ಕೊಪ್ಪಳ ಜಿಲ್ಲಾ ಮತ್ತು ಕಾರಟಗಿ ತಾಲ್ಲೂಕು ಕ್ರೀಡಾ ಇಲಾಖೆಯ ಕಛೇರಿಗೆ ಸಂಪರ್ಕಿಸುವಂತೆ ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande