ನವದೆಹಲಿ, 14 ಆಗಸ್ಟ್ (ಹಿ.ಸ.) :
ಆ್ಯಂಕರ್ : ಸುಂಕ ವಿವಾದದ ನಡುವೆಯೂ, ಭಾರತ ಅಮೆರಿಕದೊಂದಿಗೆ ಪರಸ್ಪರ ಗೌರವ, ಹಂಚಿಕೆಯ ಹಿತಾಸಕ್ತಿಗಳ ಆಧಾರದ ಮೇಲೆ ಬಲವಾದ ಕಾರ್ಯಸೂಚಿಯತ್ತ ಕೇಂದ್ರೀಕರಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಎರಡೂ ದೇಶಗಳ ಪಾಲುದಾರಿಕೆ ಪ್ರಜಾಪ್ರಭುತ್ವ ಮೌಲ್ಯಗಳು, ಸಾಮಾನ್ಯ ಹಿತಾಸಕ್ತಿಗಳು ಹಾಗೂ ಜನ ಸಂಪರ್ಕದ ಮೇಲೆ ನಿಂತಿದೆ ಎಂದಿದ್ದಾರೆ.
ವಾಣಿಜ್ಯ ಒಪ್ಪಂದದ ಮಾತುಕತೆ ನಡೆಯುತ್ತಿದ್ದು, ರಾಷ್ಟ್ರೀಯ ಹಿತಾಸಕ್ತಿಯಲ್ಲಿ ರಾಜಿ ಇಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ರಕ್ಷಣಾ ಸಂಬಂಧಗಳು ಮೂಲಭೂತ ಒಪ್ಪಂದಗಳ ಮೇಲೆ ಆಧಾರಿತವಾಗಿದ್ದು, ಈ ತಿಂಗಳ ಕೊನೆಯಲ್ಲಿ ಅಲಾಸ್ಕಾದಲ್ಲಿ ಯುದ್ಧ್ ಅಭ್ಯಾಸ ಜಂಟಿ ಮಿಲಿಟರಿ ವ್ಯಾಯಾಮ ಹಾಗೂ ದೆಹಲಿಯಲ್ಲಿ 2+2 ಅಂತರ-ಅಧಿವೇಶನ ಸಭೆ ನಡೆಯಲಿದೆ.
ಅಮೆರಿಕ ಮಾನವ ಹಕ್ಕುಗಳ ವರದಿಯನ್ನು ಭಾರತ ತಿರಸ್ಕರಿಸಿ, ಅದು ಪಕ್ಷಪಾತಿ ಹಾಗೂ ತಪ್ಪು ನಿರೂಪಣೆಗಳ ಮಿಶ್ರಣವೆಂದು ಹೇಳಿದೆ. ಮಾನವ ಹಕ್ಕು ರಕ್ಷಣೆಗೆ ಭಾರತ ಸಮಗ್ರ ಆಡಳಿತ ಮತ್ತು ಅಭಿವೃದ್ಧಿಗೆ ಬದ್ಧವಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa