ಶಿಮ್ಲಾ, 14 ಆಗಸ್ಟ್ (ಹಿ.ಸ.) :
ಆ್ಯಂಕರ್ : ಹಿಮಾಚಲ ಪ್ರದೇಶದಲ್ಲಿ ಕಳೆದ ರಾತ್ರಿ ಕುಲ್ಲು, ಕಿನ್ನೌರ್, ಲಹೌಲ್-ಸ್ಪಿತಿ ಹಾಗೂ ಶಿಮ್ಲಾ ಜಿಲ್ಲೆಗಳಲ್ಲಿ ಮೇಘಸ್ಫೋಟದಿಂದ ಭಾರಿ ಹಾನಿಯಾಗಿದೆ.
ಅನೇಕ ಸೇತುವೆಗಳು, ವಾಹನಗಳು, ಮನೆಗಳು ಮತ್ತು ಅಂಗಡಿಗಳು ಪ್ರವಾಹದಲ್ಲಿ ಕೊಚ್ಚಿಹೋಗಿದ್ದು, ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗೆ ವ್ಯಾಪಕ ಹಾನಿಯಾಗಿದೆ.
ಅದೃಷ್ಟವಶಾತ್ ಜೀವಹಾನಿಯ ವರದಿಯಿಲ್ಲ. ಅಪಾಯಕಾರಿ ಪ್ರದೇಶಗಳ ಜನರನ್ನು ಸರಕಾರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.
ಕುಲ್ಲು ಜಿಲ್ಲೆಯ ಬಂಜಾರ್, ಕಿನ್ನೌರ್‌ನ ರಿಷಿ ಡೋಗ್ರಿ ಕಣಿವೆ, ಲಹೌಲ್-ಸ್ಪಿತಿಯ ಮಾಯಾದ್ ಕಣಿವೆ ಹಾಗೂ ಶಿಮ್ಲಾ ಜಿಲ್ಲೆಯ ನಾಂಟಿ ಖಾದ್ ಪ್ರದೇಶಗಳಲ್ಲಿ ಮನೆಗಳು, ಸೇತುವೆಗಳು, ಸೇಬು ತೋಟಗಳು, ಕೃಷಿ ಭೂಮಿ ಮತ್ತು ರಸ್ತೆ ಮೂಲಸೌಕರ್ಯ ಹಾನಿಗೊಂಡಿದೆ. ಕೆಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಮತ್ತು ಅನೇಕ ಆಂತರಿಕ ರಸ್ತೆಗಳು ಮುಚ್ಚಿವೆ.
ಹವಾಮಾನ ಇಲಾಖೆ ಚಂಬಾ, ಕಾಂಗ್ರಾ, ಮಂಡಿ ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಿದ್ದು, ಆಗಸ್ಟ್ 19ರವರೆಗೆ ಜಾಗ್ರತೆ ವಹಿಸಲು ಸೂಚಿಸಿದೆ. ನದಿಗಳು-ತೊರೆಗಳ ಬಳಿ ಹೋಗಬಾರದೆಂದು ಹಾಗೂ ಅನಗತ್ಯ ಪ್ರಯಾಣ ತಪ್ಪಿಸಿಕೊಳ್ಳುವಂತೆ ಜನರಿಗೆ ಮನವಿ ಮಾಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa