ಬಳ್ಳಾರಿ : ಆ.17 ರಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ, 14 ಆಗಸ್ಟ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಗೆ ಬರುವ 110/11 ಕೆವಿ ಯ ಸೌತ್ ವಿದ್ಯುತ್ ವಿತರಣ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಫ್-25 ಹಾಗೂ ಎಫ್-46 ಫೀಡರನಲ್ಲಿ ಲಿಂಕ್ ಲೈನ್ ಕಾಮಗಾರಿ ಕೈಗೊಂಡಿರುವುದರಿಂದ ಆ.17 ರಂದು ಬೆಳಿಗ್ಗೆ 8 ರಿಂದ
ಬಳ್ಳಾರಿ : ಆ.17 ರಂದು ವಿದ್ಯುತ್ ವ್ಯತ್ಯಯ


ಬಳ್ಳಾರಿ, 14 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಗೆ ಬರುವ 110/11 ಕೆವಿ ಯ ಸೌತ್ ವಿದ್ಯುತ್ ವಿತರಣ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಫ್-25 ಹಾಗೂ ಎಫ್-46 ಫೀಡರನಲ್ಲಿ ಲಿಂಕ್ ಲೈನ್ ಕಾಮಗಾರಿ ಕೈಗೊಂಡಿರುವುದರಿಂದ ಆ.17 ರಂದು ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ನಗರದ ಪ್ರದೇಶಗಳಾದ ಆರ್.ಕೆ.ಮಿಲ್ ರೋಡ್, ಬಾಪೂಜಿ ನಗರ, ಬಾಪೂಜಿ ನಗರ ಸರ್ಕಲ್, ರಾಣಿತೋಟ, ಕಣೆಕಲ್ ಬಸ್‍ಸ್ಟ್ಯಾಂಡ್, ದೊಡ್ಡ ಮಾರ್ಕೆಟ್, ಸಣ್ಣ ಮಾರ್ಕೆಟ್, ಕಾರ್ಕಲ ತೋಟ, ಸಾಯಿ ಕಾಲೋನಿ, ಆರ್.ಆರ್ ಲೇಔಟ್, ಟೋಪಿಗಲ್ಲಿ, ಮರಿಸ್ವಾಮಿ ಮಠ, ಇಂಡಸ್ಟ್ರಿಯಲ್ ಏರಿಯಾ ಹಂತ-1, ಮಾರೆಮ್ಮನ ಗುಡಿ ಹಿಂಭಾಗ ಸೇರಿದಂತೆ ಇನ್ನೂ ಮುಂತಾದ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande