ಬಿಕೆಐ ಭಯೋತ್ಪಾದಕ ಸಂಚು ವಿಫಲ : ಇಬ್ಬರು ಕಾರ್ಯಕರ್ತರ ಬಂಧನ
ಚಂಡೀಗಡ, 14 ಆಗಸ್ಟ್ (ಹಿ.ಸ.) : ಆ್ಯಂಕರ್ : ಪಂಜಾಬ್‌ ಫಿರೋಜ್‌ಪುರ ಕೌಂಟರ್‌ ಇಂಟೆಲಿಜೆನ್ಸ್‌ ತಂಡ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ ಭಯೋತ್ಪಾದಕ ಸಂಘಟನೆಯ ಇಬ್ಬರನ್ನು ಬಂಧಿಸಿ ಪ್ರಮುಖ ಸಂಚು ವಿಫಲಗೊಳಿಸಿದೆ. ಬಂಧಿತರಾದ ಹರ್‌ಪ್ರೀತ್‌ ಸಿಂಗ್‌ ಅಲಿಯಾಸ್‌ ಪ್ರೀತ್‌ (ಭುಲ್ಲಾರ್‌ ಗ್ರಾಮ, ತರಣ್‌ ತರಣ್
Arrest


ಚಂಡೀಗಡ, 14 ಆಗಸ್ಟ್ (ಹಿ.ಸ.) :

ಆ್ಯಂಕರ್ : ಪಂಜಾಬ್‌ ಫಿರೋಜ್‌ಪುರ ಕೌಂಟರ್‌ ಇಂಟೆಲಿಜೆನ್ಸ್‌ ತಂಡ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ ಭಯೋತ್ಪಾದಕ ಸಂಘಟನೆಯ ಇಬ್ಬರನ್ನು ಬಂಧಿಸಿ ಪ್ರಮುಖ ಸಂಚು ವಿಫಲಗೊಳಿಸಿದೆ.

ಬಂಧಿತರಾದ ಹರ್‌ಪ್ರೀತ್‌ ಸಿಂಗ್‌ ಅಲಿಯಾಸ್‌ ಪ್ರೀತ್‌ (ಭುಲ್ಲಾರ್‌ ಗ್ರಾಮ, ತರಣ್‌ ತರಣ್‌) ಮತ್ತು ಗುಲ್ಶನ್‌ ಸಿಂಗ್‌ ಅಲಿಯಾಸ್‌ ನಂದು (ರಾಂಪುರ, ಅಮೃತಸರ) ಅವರ ಬಳಿಯಿಂದ 2 ಹ್ಯಾಂಡ್‌ ಗ್ರೆನೇಡ್‌, 9 ಮಿಮೀ ಪಿಸ್ತೂಲ್‌, 5 ಜೀವಂತ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಪಂಜಾಬ್ ಡಿಜಿಪಿ ಗೌರವ್‌ ಯಾದವ್‌ , ಆರೋಪಿಗಳು ಯುಕೆ, ಯುಎಸ್‌ಎ, ಯುರೋಪ್‌ನ ವಿದೇಶಿ ನಿರ್ವಾಹಕರ ಸೂಚನೆಗೆ ಅನುಸಾರವಾಗಿ ಸರ್ಕಾರಿ ಕಟ್ಟಡಗಳು ಹಾಗೂ ಪೊಲೀಸ್‌ ಕಚೇರಿಗಳನ್ನು ಗುರಿಯಾಗಿಸಿ ಸ್ಪೋಟಿಸಲು ಯೋಜಿಸಿದ್ದರು ಎಂದು ತಿಳಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪಂಜಾಬ್ ಪೋಲಿಸರು ಹೆಚ್ಚಿನ ಕೈಗೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande