ದಿವಂಗತ. ಹೊ. ವೆ ಶೇಷಾದ್ರಿ ಸಂಸ್ಮರಣ ಕೃತಿ ಬಿಡುಗಡೆಗೆ ಮಾಹಿತಿ ಆಹ್ವಾನ
ಬೆಂಗಳೂರು, 01 ಆಗಸ್ಟ್ (ಹಿ.ಸ.) : ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ ಕಾರ್ಯವಾಹರಾಗಿದ್ದ ದಿವಂಗತ ಹೊ.ವೆ.ಶೇಷಾದ್ರಿ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಒಂದು ಪುಸ್ತಕ ಹೊರ ತರಬೇಕೆಂಬ ಬಯಕೆ ವರ್ಷಗಳಿಂದ ಇದ್ದು ಸದ್ಯದಲ್ಲೇ ಸಮೀಪಿಸುತ್ತಿರುವ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಕೃತಿ
ಶೇಷಾದ್ರಿ


ಬೆಂಗಳೂರು, 01 ಆಗಸ್ಟ್ (ಹಿ.ಸ.) :

ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ ಕಾರ್ಯವಾಹರಾಗಿದ್ದ ದಿವಂಗತ ಹೊ.ವೆ.ಶೇಷಾದ್ರಿ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಒಂದು ಪುಸ್ತಕ ಹೊರ ತರಬೇಕೆಂಬ ಬಯಕೆ ವರ್ಷಗಳಿಂದ ಇದ್ದು ಸದ್ಯದಲ್ಲೇ ಸಮೀಪಿಸುತ್ತಿರುವ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಕೃತಿ ಹೊರ ತರುವ ಉದ್ದೇಶ ಹೊಂದಲಾಗಿದೆ ಎಂದು ಸಂಸ್ಕ್ರತ ಭಾರತಿ ಪ್ರಕಾಶನದ ಮುಖ್ಯಸ್ಥ ದಿನೇಶ್ ಕಾಮತ ತಿಳಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಶೇಷಾದ್ರಿಯವರಿಂದ ಪ್ರೇರಣೆ, ಚಿಂತನೆ ಪಡೆದ, ಅವರ ಹಾಸ್ಯ ಚಟಾಕಿಯನ್ನು ಆಸ್ವಾದಿಸಿದ ಲಕ್ಷಾಂತರ ಕಾರ್ಯಕರ್ತರು ವಿಶ್ವದಾದ್ಯಂತ ಹರಡಿದ್ದಾರೆ.

ಅವರ ಅಭಿಮಾನಿಗಳು ಹಾಗೂ ಸಂಘದ ಸದಸ್ಯರು ಅವರಿಂದ ಪಡೆದ ಪ್ರೇರಕ ಪ್ರಸಂಗ ನೆನಪಿದ್ದರೆ ಅಂತಹ ಮಾಹಿತಿಯನ್ನು ಶೀಘ್ರವಾಗಿ ಹಂಚಿಕೊಳ್ಳಲು ಕಾಮತ್ ಮನವಿ ಮಾಡಿದ್ದಾರೆ.

ಶೇಷಾದ್ರಿಗಳ ವ್ಯಕ್ತಿತ್ವವನ್ನು ನಿರೂಪಿಸುವ ಪುಸ್ತಕದ ರಚನೆಗೆ ನಿಮ್ಮ ಕೊಡುಗೆಯೂ ಇರಲಿ. ಪುಸ್ತಕ ಹೊರ ಬಂದ ನಂತರ, ನನ್ನ ಕೊಡುಗೆಯನ್ನೂ ಸೇರಿಸಬಹುದಿತ್ತು ಎಂದು ಅನಿಸಿದರೆ ಉಪಯೋಗವಿಲ್ಲ ಎಂದಿದ್ದಾರೆ.

ಮಾಹಿತಿ ಹಂಚಿಕೊಳ್ಳಲು ಅನುಭವ ಪತ್ರ ಭಾವಚಿತ್ರಗಳನ್ನು ಲಿಖಿತ ಅಂಚೆಪತ್ರದ/ಧ್ವನಿಮುದ್ರಿತ ರೂಪದಲ್ಲಿ ವಾಟ್ಸಾಪ್/ಇ-ಮೇಲ್ ಮೂಲಕ ಸಂಕ್ಷಿಪ್ತ ಪರಿಚಯದೊಂದಿಗೆ ಕಳುಹಿಸಲು ಕೋರಿದ್ದಾರೆ.

ಮಾಹಿತಿ ಹಂಚಿಕೊಳ್ಳುವ ವಿಳಾಸ:

ದಿನೇಶ ಕಾಮತ್

ಸಂಸ್ಕೃತ ಭಾರತಿ

ಅಕ್ಷರಂ, 8 ನೇ ಕ್ರಾಸ್, 2 ನೇ ಹಂತ,

ಗಿರಿನಗರ, *ಬೆಂಗಳೂರು - 560085

E mail: dineshkamat46@gmail.com

WhatsApp 8072212254.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande