ಮತ ಕಳ್ಳತನ : ರಾಹುಲ್ ಗಾಂಧಿ ಹೇಳಿಕೆ ಬೌದ್ದಿಕ ದಿವಾಳಿತನಕ್ಕೆ ಸಾಕ್ಷಿ-ಎಸ್. ಸುರೇಶ್ ಕುಮಾರ್
ಬೆಂಗಳೂರು, 01 ಆಗಸ್ಟ್ (ಹಿ.ಸ.) : ಆ್ಯಂಕರ್ : ಮತ ಕಳ್ಳತನ ಎಂಬ ಪದ ಬಳಕೆ ಮೂಲಕ ರಾಹುಲ್ ಗಾಂಧಿ ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಅಸಂಬದ್ಧ ಪದವೊಂದನ್ನು ಸೇರಿಸಲು ಯತ್ನಿಸುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ರಾಜಾಜಿನಗರ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಟೀಕಿಸಿದ್ದಾರೆ. ಈ ಕುರಿತು ಮಾಧ್ಯಮ ಹೇಳಿಕ
Suresh kumar


ಬೆಂಗಳೂರು, 01 ಆಗಸ್ಟ್ (ಹಿ.ಸ.) :

ಆ್ಯಂಕರ್ : ಮತ ಕಳ್ಳತನ ಎಂಬ ಪದ ಬಳಕೆ ಮೂಲಕ ರಾಹುಲ್ ಗಾಂಧಿ ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಅಸಂಬದ್ಧ ಪದವೊಂದನ್ನು ಸೇರಿಸಲು ಯತ್ನಿಸುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ರಾಜಾಜಿನಗರ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಟೀಕಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಪದಪ್ರಯೋಗ ರಾಹುಲ್ ಗಾಂಧಿಯ ಹತಾಶೆ ಮತ್ತು ಬೌದ್ಧಿಕ ದಿವಾಳಿತನದ ಪ್ರತಿರೂಪವಾಗಿದೆ. ಇವರು ಮತ್ತು ಕಾಂಗ್ರೆಸ್ ನಾಯಕತ್ವ ಹೊಸ ರೀತಿಯ ರಾಜಕೀಯ ಮನೋರೋಗದಿಂದ ಬಳಲುತ್ತಿದ್ದಾರೆ. ಇಂತಹ ಆರೋಪಗಳನ್ನು ಮಾಡುತ್ತಿರುವ ಬದಲು ಅವರು ಮನೋವೈದ್ಯರನ್ನು ಭೇಟಿಯಾಗಬೇಕು, ಎಂದು ವ್ಯಂಗ್ಯವಾಡಿದ್ದಾರೆ.

ಮಹದೇವಪುರ ಕ್ಷೇತ್ರದ ಅಂಕಿಅಂಶಗಳ ಪ್ರಕಾರ, 2009 ರಿಂದ 2024ರವರೆಗೆ ಬಿಜೆಪಿ ಸತತವಾಗಿ ಮುನ್ನಡೆ ಸಾಧಿಸಿದ್ದು, 2024ರಲ್ಲಿ 39,529 ಮತಗಳ ಅಂತರದಿಂದ ಗೆಲುವು ಸಾಧಿಸಿದೆ. ರಾಜಾಜಿನಗರದಲ್ಲಿಯೂ ಮತದಾರರ ಸಂಖ್ಯೆ ಸಹಜವಾಗಿ ಹೆಚ್ಚಾಗಿರುವುದರಿಂದ ಮತ ಕಳ್ಳತನದ ಆರೋಪಕ್ಕೆ ಯಾವುದೇ ತಾರ್ಕಿಕ ಆಧಾರವಿಲ್ಲ ಎಂದು ಹೇಳಿದ್ದಾರೆ.

ಬಿಹಾರ ಚುನಾವಣೆ ಹಿನ್ನಲೆಯಲ್ಲಿ, ಚುನಾವಣಾ ಆಯೋಗ ನಕಲಿ ಮತ್ತು ಮೃತ ಮತದಾರರನ್ನು ಪಟ್ಟಿ ಯಿಂದ ತೆಗೆದು ಹಾಕಲು ಕ್ರಮ ಕೈಗೊಂಡಿದ್ದು, ಇದರಿಂದ ಕಾಂಗ್ರೆಸ್‌ ಗಾಬರಿಗೊಳ್ಳುತ್ತಿದೆ. ಆದರೆ ಇದರ ವಿರುದ್ಧ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸುವುದು ಪ್ರಜಾಪ್ರಭುತ್ವದ ಅಣಕವಾಗಿದೆ ಎಂದು ಅವರು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ಧಾರಾಮಯ್ಯ ರಾಹುಲ್ ಗಾಂಧಿಯ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದನ್ನು ಸಹ ಸುರೇಶ್ ಕುಮಾರ್ ಪ್ರಶ್ನಿಸಿದ್ದು. ಅವರು ಅನುಭವಿ ನಾಯಕರು. ಆದರೂ ಈ ಅಸಂಬದ್ಧ ನಿಲುವಿಗೆ ಬೆಂಬಲ ಕೊಡುವುದು ದುರದೃಷ್ಟಕರ ಎಂದು ಹೇಳಿದ್ದಾರೆ.

ಮತ ಕಳ್ಳತನ ಆರೋಪಗಳು ಯಾವುದೇ ದಾಖಲೆಗಳಿಲ್ಲದೆ ಎತ್ತಲ್ಪಟ್ಟಿವೆ. ಈ ಕುರಿತು ನ್ಯಾಯಾಂಗ ಹೋರಾಟ ಮುಂದುವರಿಸಬೇಕು, ಬಹಿರಂಗ ಕಳಪೆ ರಾಜಕೀಯದಿಂದ ಪ್ರಜಾಪ್ರಭುತ್ವವನ್ನೇ ಅಪಮಾನಿಸುವಂತಾಗಬಾರದು, ಎಂದು ಸುರೇಶ ಕುಮಾರ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande