ಬಳ್ಳಾರಿ : `ರಂಗಭೂಮಿಯ ಅನಘ್ರ್ಯ ರತ್ನ ಬಳ್ಳಾರಿ ರಾಘವ' ಬಿಡುಗಡೆ
ಬಳ್ಳಾರಿ, 01 ಆಗಸ್ಟ್ (ಹಿ.ಸ.) : ಆ್ಯಂಕರ್ : ಕಲಾರತ್ನ ರಾಘವರ ಜಯಂತಿಯ ಅಂಗವಾಗಿ ಲೇಖಕ ಸಿದ್ದರಾಮ ಕಲ್ಮಠ ಅವರು ಬರೆದಿರುವ `ರಂಗಭೂಮಿಯ ಅನಘ್ರ್ಯ ರತ್ನ ಬಳ್ಳಾರಿ ರಾಘವ'' ಪುಸ್ತಕದ ಲೋಕಾರ್ಪಣೆಯು ರಾಘವ ಕಲಾಮಂದಿರದಲ್ಲಿ ಆಗಸ್ಟ್ 2ರ ಶನಿವಾರ ಸಂಜೆ 6 ಗಂಟೆಗೆ ನಡೆಯಲಿದೆ. ಬಳ್ಳಾರಿಯ ವಿಜಯನಗರ ಶ್ರೀಕ
ಬಳ್ಳಾರಿ : `ರಂಗಭೂಮಿಯ ಅನಘ್ರ್ಯ ರತ್ನ ಬಳ್ಳಾರಿ ರಾಘವ' ಬಿಡುಗಡೆ


ಬಳ್ಳಾರಿ, 01 ಆಗಸ್ಟ್ (ಹಿ.ಸ.) :

ಆ್ಯಂಕರ್ : ಕಲಾರತ್ನ ರಾಘವರ ಜಯಂತಿಯ ಅಂಗವಾಗಿ ಲೇಖಕ ಸಿದ್ದರಾಮ ಕಲ್ಮಠ ಅವರು ಬರೆದಿರುವ `ರಂಗಭೂಮಿಯ ಅನಘ್ರ್ಯ ರತ್ನ ಬಳ್ಳಾರಿ ರಾಘವ' ಪುಸ್ತಕದ ಲೋಕಾರ್ಪಣೆಯು ರಾಘವ ಕಲಾಮಂದಿರದಲ್ಲಿ ಆಗಸ್ಟ್ 2ರ ಶನಿವಾರ ಸಂಜೆ 6 ಗಂಟೆಗೆ ನಡೆಯಲಿದೆ.

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಸಿ. ನಾಗರಾಜ್ ಅವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ ಅವರು ಮುಖ್ಯ ಅತಿಥಿಗಳಾಗಿದ್ದಾರೆ.

ರಾಘವ ಮೆಮೋರಿಯಲ್ ಅಸೋಸಿಯೇಷನ್‍ನ ಗೌರವಾಧ್ಯಕ್ಷ ಕೆ. ಚನ್ನಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿ ಪುರಸ್ಕøತ ಡಿಂಗ್ರಿ ನಾಗರಾಜ್ ಅವರಿಗೆ ಈ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಧಾರವಾಡದ ಕಲಾ ಸಂಗಮ ಸಂಸ್ಥೆಯು `ಸಮರ ಸಿಂಹ ಸಂಗೊಳ್ಳಿ ರಾಯಣ್ಣ' ಐತಿಹಾಸಕ ನಾಟಕ ಪ್ರದರ್ಶನ ಮಾಡಲಿದೆ.

ವಿವರಗಳಿಗಾಗಿ : ಲೇಖಕ ಸಿದ್ದರಾಮ ಕಲ್ಮಠ, ಮೊಬೈಲ್ : 99861 16606 ಗೆ ಸಂಪರ್ಕಿಸಿರಿ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande