ಶಿವಶರಣೆ ಹೆಮರಡ್ಡಿ ಮಲ್ಲಮ್ಮ ದೇವಸ್ಥಾನ ಕಟ್ಟಡ ಭೂಮಿ ಪೂಜಾ ಕಾರ್ಯ
ಗದಗ, 01 ಆಗಸ್ಟ್ (ಹಿ.ಸ.) : ಆ್ಯಂಕರ್ : ದಾನ, ದಾಸೋಹ ಹಾಗೂ ನಿಸ್ವಾರ್ಥ ಭಕ್ತಿಗೆ ಹೆಸರಾದ ಹೇಮರಡ್ಡಿ ಮಲ್ಲಮ್ಮ ಮೋಕ್ಷದ ಮಾರ್ಗ ತೋರಿದ ಮಹಾಸಾದ್ವಿ, ಸಮಾಜ ಸುಧಾರಣೆಯಲ್ಲಿ ಕ್ರಾಂತಿ ಮಾಡಿದ ಅವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರ ವಿಚಾರ ಮತ್ತು ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್
ಪೋಟೋ


ಗದಗ, 01 ಆಗಸ್ಟ್ (ಹಿ.ಸ.) :

ಆ್ಯಂಕರ್ : ದಾನ, ದಾಸೋಹ ಹಾಗೂ ನಿಸ್ವಾರ್ಥ ಭಕ್ತಿಗೆ ಹೆಸರಾದ ಹೇಮರಡ್ಡಿ ಮಲ್ಲಮ್ಮ ಮೋಕ್ಷದ ಮಾರ್ಗ ತೋರಿದ ಮಹಾಸಾದ್ವಿ, ಸಮಾಜ ಸುಧಾರಣೆಯಲ್ಲಿ ಕ್ರಾಂತಿ ಮಾಡಿದ ಅವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರ ವಿಚಾರ ಮತ್ತು ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಆದರ್ಶಪ್ರಾಯರಾಗಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಗದಗ ಜಿಲ್ಲೆಯ ಡಂಬಳ ಹೋಬಳಿಯ ಹಳ್ಳಿಗುಡಿ ಗ್ರಾಮದಲ್ಲಿ ಶಿವಶರಣೆ ಹೆಮರಡ್ಡಿ ಮಲ್ಲಮ್ಮ ದೇವಸ್ಥಾನ ಕಟ್ಟಡ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೇಮರೆಡ್ಡಿ ಮಲ್ಲಮ್ಮ ಸೂರ್ಯ-ಚಂದ್ರರಿರುವವರೆಗೂ ಸಮಾಜಕ್ಕೆ

ಅನ್ನದ ಕೊರತೆ ಬರಬಾರದು ಎಂದು ಶಿವನಿಂದ ವರ ಪಡೆದ ಮಹಾಮಾತೆ. ಅವರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.

ವೇ.ಮೂ. ಶಂಕ್ರಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಬ್ಬಿಗೇರಿಯ ಹೇಮರಡ್ಡಿ ಮಲ್ಲಮ್ಮ ಸದ್ಯೋಧನಾ ನಾಡೋಜ ಜಗದ್ಗುರು ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರೀಮಂತಿಕೆ ಅಂದರೆ ಹಣ, ಚಿನ್ನವಲ್ಲ, ಪರಸ್ಪರ ಪ್ರೀತಿ ಗೌರವದಿಂದ ಕಾಣುವುದು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಎಲ್ಲಾ ಸಮುದಾಯಗಳೊಂದಿಗೆ ಸಹಬಾಳ್ವೆಯಿಂದ ಬದುಕುವಂತೆ ಮಲ್ಲಮ್ಮ ಬೋಧಿಸಿದವರು. ಅವರು ಹಾಕಿಕೊಟ್ಟಿರುವ ಆದರ್ಶದಲ್ಲಿ ನಡೆಯಬೇಕು ಮತ್ತು ಮಹಿಳೆಯರು ದೇವಸ್ಥಾನ ಕಟ್ಟಲು ತಮ್ಮ ಸಹಕಾರವನ್ನು ನೀಡಬೇಕು ಎಂದು ಹೇಳಿದರು.

ಬಸವರಾಜ ಶ್ರೀಗಳು, ಅನ್ನಪೂರ್ಣ ಜಿ.ಪಾಟೀಲ, ಮುಂಡರಗಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ, ಗೋಣಿಬಸಪ್ಪ ಕೊರ್ಲಹಳ್ಳಿ, ಎಫ್.ಎಸ್. ಗೊಡಿ. ಶಂಕ್ರಪ್ಪ ಅಂದಾನಪ್ಪ ಚನ್ನಳ್ಳಿ, ಹನಮಂತಪ್ಪ ಗಡ್ಡದ, ಬಿ.ಎಸ್. ಮೇಟಿ, ಗುರಪ್ಪ ಕುರ್ತಕೋಟಿ, ಚಂದ್ರಪ್ಪ ಚನ್ನಳ್ಳಿ, ಶೋಭಾ ಮೇಟಿ,

ಕುಮಾರ ಗಡಗಿ, ಜಗದೀಶ ಅವರಡ್ಡಿ, ಸುರೇಶ ಶಿರೋಳ, ಬಸವರಡ್ಡಿ ಬಂಡಿಹಾಳ, ಕುಮಾರ ಗಡಗಿ, ಭೀಮರೆಡ್ಡಿ ರಡ್ಡೆರೆ, ಹೇಮರಡ್ಡಿ ಮುಂಡರಗಿ, ಮಹೇಶ ಗಡಗಿ, ವಿ.ಟಿ. ಮೇಟಿ, ಗುರುಪುತ್ರಪ್ಪ ಸಂಶಿ, ದೇವರಡ್ಡಿ ಕಾತರಕಿ, ವಿರೂಪಾಕ್ಷಗೌಡ ಮರಿಗೌಡ್ರ, ಗ್ರಾಮದ ಹಿರಿಯರು, ಸಮಿತಿಯ ಸದಸ್ಯರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande