ಸಂಡೂರು : ನಾರಿಹಳ್ಳ ಜಲಾಶಯದಿಂದ 0.244 ಟಿಎಂಸಿ ನೀರು ಹೊರಗಡೆ
ಸಂಡೂರು, 01 ಆಗಸ್ಟ್ (ಹಿ.ಸ.) : ಆ್ಯಂಕರ್ : ಪ್ರಸ್ತಕ ಸಾಲಿನ ಮುಂಗಾರಿನ ಮುಂಚಿತವಾಗಿ ದುರಸ್ಥಿ ಕಾಮಗಾರಿ ಕೈಗೊಳ್ಳಲು ಹಾಗೂ ಕ್ರಸ್ಟ್ ಗೇಟ್ ನ ಸಿಲ್ ಲೆವೆಲ್ ನ ವರೆಗೆ ನೀರನ್ನು ಹೊರತೆಗೆಯಬೇಕಾಗಿರುವುದರಿಂದ 0.244 ಟಿಎಂಸಿ ನೀರನ್ನು ಸ್ಪಿಲ್‍ವೇ ಮೂಲಕ ಹೊರಬಿಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಮಹಮ
ಸಂಡೂರು : ನಾರಿಹಳ್ಳ ಜಲಾಶಯದಿಂದ 0.244 ಟಿಎಂಸಿ ನೀರು ಹೊರಗಡೆ


ಸಂಡೂರು, 01 ಆಗಸ್ಟ್ (ಹಿ.ಸ.) :

ಆ್ಯಂಕರ್ : ಪ್ರಸ್ತಕ ಸಾಲಿನ ಮುಂಗಾರಿನ ಮುಂಚಿತವಾಗಿ ದುರಸ್ಥಿ ಕಾಮಗಾರಿ ಕೈಗೊಳ್ಳಲು ಹಾಗೂ ಕ್ರಸ್ಟ್ ಗೇಟ್ ನ ಸಿಲ್ ಲೆವೆಲ್ ನ ವರೆಗೆ ನೀರನ್ನು ಹೊರತೆಗೆಯಬೇಕಾಗಿರುವುದರಿಂದ 0.244 ಟಿಎಂಸಿ ನೀರನ್ನು ಸ್ಪಿಲ್‍ವೇ ಮೂಲಕ ಹೊರಬಿಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು ತಿಳಿಸಿದ್ದಾರೆ.

ಸಂಡೂರು ತಾಲ್ಲೂಕಿನ ನಾರಿಹಳ್ಳ ಜಲಾಶಯದ ಕ್ರಸ್ಟ್ ಗೇಟ್ ನ ಸಿಲ್ ಲೆವೆಲ್ ಮಟ್ಟ 536.219 ಮೀ(ಒಟ್ಟು 0.409 ಟಿಎಂಸಿ ಸಂಗ್ರಹ) ಇದ್ದು, ನಿವ್ವಳ ಸಂಗ್ರಹಣೆ 0.336 ಟಿಎಂಸಿ ಇದೆ. ಈಗಾಗಲೇ ಜಲಾಶಯದಲ್ಲಿ ನೀರಿನ ಮಟ್ಟ 540.76 ಮೀ(ಒಟ್ಟು 0.653 ಟಿಎಂಸಿ ಸಂಗ್ರಹ) ಮತ್ತು ನಿವ್ವಳ ಸಂಗ್ರಹಣೆ 0.580 ಟಿಎಂಸಿ ಇದೆ ಎಂದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande