ವಿಮಾ ಮೊತ್ತ ಕೋರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು
ಬಳ್ಳಾರಿ, 01 ಆಗಸ್ಟ್ (ಹಿ.ಸ.) : ಆ್ಯಂಕರ್ : ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಬಪೂರಮ್ ಕೌತಳಂ ಮಂಡಲದ ನಿವಾಸಿಯಾದ ಚಲುವಾದಿ ಈರಮ್ಮ ಅವರು ಕರ್ನೂಲ್‍ನ ಚೋಲಮಂಡಲಂ ಎಂ.ಎಸ್.ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ವ್ಯವಸ್ಥಾಪಕರ ವಿರುದ್ಧ, ಕಳ್ಳತನವಾದ ಟ್ರಾಕ್ಟರ್ ಟ್ರೈಲರ್ ಗೆ ವಿಮಾ ಪರಿಹಾರ ಮೊತ್ತ
ವಿಮಾ ಮೊತ್ತ ಕೋರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು


ಬಳ್ಳಾರಿ, 01 ಆಗಸ್ಟ್ (ಹಿ.ಸ.) :

ಆ್ಯಂಕರ್ : ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಬಪೂರಮ್ ಕೌತಳಂ ಮಂಡಲದ ನಿವಾಸಿಯಾದ ಚಲುವಾದಿ ಈರಮ್ಮ ಅವರು ಕರ್ನೂಲ್‍ನ ಚೋಲಮಂಡಲಂ ಎಂ.ಎಸ್.ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ವ್ಯವಸ್ಥಾಪಕರ ವಿರುದ್ಧ, ಕಳ್ಳತನವಾದ ಟ್ರಾಕ್ಟರ್ ಟ್ರೈಲರ್ ಗೆ ವಿಮಾ ಪರಿಹಾರ ಮೊತ್ತ ರೂ.9,08,000/- ಕೋರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ದೂರುದಾರರು ಎದುರುದಾರರ ವಿಮಾ ಕಂಪನಿಯಿಂದ ತಮ್ಮ ವಾಹನ ಟ್ರಾಕ್ಟರ್ ನೋಂದಣಿ ಸಂಖ್ಯೆ:ಎ.ಪಿ-39/ಟಿ.ಎಸ್-7421ನೇ ಸಂಬಂಧಿಸಿದಂತೆ ಪಾಲಿಸಿ ಪಡೆದಿದ್ದು, ಈ ಪಾಲಿಸಿಯು 2022ರ ನವೆಂಬರ್ 22 ರಿಂದ 2023ರ ನವೆಂಬರ್ 24 ರ ವರೆಗೆ ಚಾಲ್ತಿಯಲ್ಲಿತ್ತು. ಬೊಬ್ಬನಹಾಳ್ ಗ್ರಾಮದ ಅವರ ಸ್ನೇಹಿತರಾದ ಮೋಹನ್ ರೆಡ್ಡಿ ಜಮೀನಿನ ಶೆಡ್ಡಿನಲ್ಲಿ 2023 ರ ಜೂನ್ 10 ರಂದು ಟ್ರಾಕ್ಟರ್ ಟ್ರೈಲರ್‍ನ್ನು ನಿಲ್ಲಿಸಿರುತ್ತಾರೆ.

ಮಾರನೇ ದಿನ ನೋಡಿದಾಗ ವಾಹನವು 2023ರ ಜೂನ್11 ರಂದು ಕಳ್ಳತನವಾಗಿದ್ದು, ಈ ಕುರಿತು ಸಂಬಂಧಪಟ್ಟ ವ್ಯಾಪ್ತಿಯ ಪೆÇೀಲಿಸ್ ಠಾಣೆಗೆ ದೂರು ನೀಡಿದ್ದರು. ಪೆÇೀಲಿಸ್ ಇಲ್ಲಾಖೆಯಿಂದ ವಾಹನ ಪತ್ತೆಯಾಗದ ಬಗ್ಗೆ ಸಂಬಂಧಪಟ್ಟ ಕೊರ್ಟ್ ಗೆ “ಸಿ” ವರದಿ ಸಹ ಸಲ್ಲಿಸಿದ್ದರು.

ನಂತರ ಪಿರ್ಯಾದುದಾರರು ವಿಮಾ ಕಂಪನಿಗೆ ಮಾಹಿತಿ ನೀಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದಾಗ್ಯೂ ಸಹ ಪರಿಹಾರ ಮೊತ್ತ ನೀಡಿದಿರುವ ಕಾರಣ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು. ಎದುರುದಾರರು ಪ್ರಕರಣದಲ್ಲಿ ಹಾಜರಾಗಿ ತಕರಾರು ಸಲ್ಲಿಸಿ, ವಾಹನ ಕಳ್ಳತನವಾದ 12 ದಿನಗಳ ನಂತರ ವಿಮಾ ಕಂಪನಿಗೆ ಹಾಗೂ ಪೆÇೀಲಿಸ್ ಠಾಣೆಗೆ ದೂರು ನೀಡಿರುವುದರಿಂದ ವಿಮಾ ಪಾಲಿಸಿಯ ಷರತ್ತನ್ನು ಉಲ್ಲಂಘಿಸಿದ್ದರು. ಅಲ್ಲದೇ ಕಳ್ಳತನವಾದ ವಾಹನ ದಾಖಲೆಗಳ ಪತ್ರಗಳನ್ನು ಸಲ್ಲಿಸಲು ಸೂಚಿಸಿದರೂ ದೂರುದಾರರು ಸಲ್ಲಿಸದೇ ಇರುವುದರಿಂದ ನೋ ಕ್ಲೈಮ್ ಎಂದು ವಿಲೇಗೊಳಿಸಿರುತ್ತಾರೆ ಎಂದು ಆಯೋಗಕ್ಕೆ ತಕರಾರು ಸಲ್ಲಿಸಿದ್ದರು.

ಆಯೋಗದ ಅಧ್ಯಕ್ಷರಾದ ಎನ್.ತಿಪ್ಪೇಸ್ವಾಮಿ ಹಾಗೂ ಮಹಿಳಾ ಸದಸ್ಯರಾದ ಮಾರ್ಲಾ ಶಶಿಕಲಾ ಇವರು ಉಭಯ ಪಕ್ಷಗಾರರ ವಾದ ವಿವಾದ ಆಲಿಸಿದ ನಂತರ ದೂರುದಾರರ ವಾಹನವು ಕಳ್ಳತನವಾದ ಬಗ್ಗೆ ಸಂಬಂಧಪಟ್ಟ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ಬಳ್ಳಾರಿ ಜೆ.ಎಮ್.ಎಫ್.ಸಿ. ನ್ಯಾಯಲಯಕ್ಕೆ ಸಿ ವರದಿ ಸಲ್ಲಿಸಿರುವುದನ್ನು ಪರಿಶೀಲಿಸಿತು. ಎದುರುದಾರರು ಟ್ರಾಕ್ಟರ್ ಟ್ರೈಲರ್ ವಿಮಾ ಮೊತ್ತದ ಪರಿಹಾರ ನೀಡುವಲ್ಲಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಪರಿಗಣಿಸಿ

ತಡವಾಗಿ ವಿಮಾ ಕಂಪನಿಗೆ ಮಾಹಿತಿ ಸಲ್ಲಿರುವುದು ಷರತ್ತು ಉಲ್ಲಂಘಿಸಿದಂತೆ ಆಗುವುದಿಲ್ಲ ಎಂಬ ಆಧಾರದಲ್ಲಿ ಪ್ರಕರಣವನ್ನು ಭಾಗಶ: ಪುರಸ್ಕರಿಸಿ ಎದುರುದಾರರು ಟ್ರಾಕ್ಟರ್ ಇಂಜಿನ್‍ನ ವಿಮಾ ರಕ್ಷಣೆಯ ಐ.ಡಿ ಮೊತ್ತ ರೂ.4,56,000, ಮಾನಸಿಕ ಹಿಂಸೆಗೆ ರೂ.10,000 ಮತ್ತು ಪ್ರಕರಣದ ವೆಚ್ಚ ರೂ.5000 ಆದೇಶದ ದಿನದಿಂದ 45 ದಿನಗಳೊಳಗಾಗಿ ದೂರುದಾರರಿಗೆ ಪಾವತಿಸಲು, ತಪ್ಪಿದಲ್ಲಿ ರೂ.4,56,000/-ಗಳಿಗೆ ವಾರ್ಷಿಕ ಶೇ.6 ರಷ್ಟು ಬಡ್ಡಿ ಪಾವತಿಸಲು ಸಹ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande