ನವದೆಹಲಿ, 04 ಜುಲೈ (ಹಿ.ಸ.) :
ಆ್ಯಂಕರ್ : ಟ್ರಿನಿಡಾಡ್ ಮತ್ತು ಟೊಬಾಗೋ ಪ್ರಧಾನಮಂತ್ರಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಅವರು ಭಾರತ ಮೂಲದ ಸಮುದಾಯವನ್ನು ಉದ್ದೇಶಿಸಿ ಮಾತನಾಡುವ ವೇಳೆ, ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕವಿತೆಯನ್ನು ಉಲ್ಲೇಖಿಸಿ ಗೌರವ ಸಲ್ಲಿಸಿದರು.
ಸಮುದಾಯ ಕಾರ್ಯಕ್ರಮದ ವೇಳೆ ಅವರು ಮೋದಿಯವರ ಗುಜರಾತಿ ಕವನ ಆಂಖ್ ಆ ಧನ್ಯ ಛೇಯಲ್ಲಿನ ಯಾತ್ರಾ ಎಂಬ ಕವನವನ್ನು ಓದಿದರು. ಈ ಕವನವು ಪ್ರಧಾನಮಂತ್ರಿ ಮೋದಿಯವರ ಜೀವನದ ಹೋರಾಟ, ನೆನಪುಗಳು ಮತ್ತು ಅನುಭವಗಳನ್ನು ಆಳವಾಗಿ ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕವಿತೆಯ ಸಾರಾಂಶ: “ನಾನು ದೂರದ ಭೂತಕಾಲಕ್ಕೆ ಹೋಗಿ ಪ್ರತಿಯೊಂದು ಮುಖವನ್ನು ಸ್ಪಷ್ಟವಾಗಿ ಗುರುತಿಸಬಲ್ಲೆ. ನೆನಪಿನ ಶಕ್ತಿ ಹೆಚ್ಚಿಸುವ ಅಗತ್ಯವಿಲ್ಲ. ನಾವು ಯಾರೊಂದಿಗೆ ನೋವು ಅನುಭವಿಸಿದ್ದೇವೋ, ಅವರ ಜೊತೆಗಿನ ಅನುಭವವೇ ಜೀವನದ ಒಂದು ಪ್ರಯಾಣವಾಗುತ್ತದೆ.”
ಈ ಕವನವು ವೈಯಕ್ತಿಕ ನೆನಪುಗಳು ಹಾಗೂ ವಲಸೆ ಜೀವಿತ ಅನುಭವಗಳ ನಡುವೆ ಗಾಢ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ವಲಸೆ ಜನರಿಗೆ ತಮ್ಮ ಬೇರುಗಳ ಪ್ರೀತಿಯನ್ನು ನೆನಪಿಸುವಂತಹ ಕವನವಿದು ಎಂದು ಬಿಸ್ಸೆಸ್ಸರ್ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa