ಪ್ರಧಾನಿ ಮೋದಿ ಅವರಿಗೆ ಟ್ರಿನಿಡಾಡ್ ಮತ್ತು ಟೊಬಾಗೋದ ಅತ್ಯುನ್ನತ ನಾಗರಿಕ ಗೌರವ
ಪೋರ್ಟ್ ಆಫ್ ಸ್ಪೇನ್, 04 ಜುಲೈ (ಹಿ.ಸ.) : ಆ್ಯಂಕರ್ : ಟ್ರಿನಿಡಾಡ್ ಮತ್ತು ಟೊಬಾಗೋ ಸರ್ಕಾರವು ಪ್ರಧಾನಿ ನರೇಂದ್ರ ಮೋದಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ''ದಿ ಆರ್ಡರ್ ಆಫ್ ದಿ ರಿಪಬ್ಲಿಕ್ ಆಫ್ ಟ್ರಿನಿಡಾಡ್ ಮತ್ತು ಟೊಬಾಗೋ'' ಅನ್ನು ಘೋಷಿಸಿದೆ. ಈ ಘೋಷಣೆಯನ್ನು ಪ್ರಧಾನಮಂತ್ರಿ ಕಮಲಾ ಪ್ರಸಾದ
Pm


ಪೋರ್ಟ್ ಆಫ್ ಸ್ಪೇನ್, 04 ಜುಲೈ (ಹಿ.ಸ.) :

ಆ್ಯಂಕರ್ : ಟ್ರಿನಿಡಾಡ್ ಮತ್ತು ಟೊಬಾಗೋ ಸರ್ಕಾರವು ಪ್ರಧಾನಿ ನರೇಂದ್ರ ಮೋದಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ 'ದಿ ಆರ್ಡರ್ ಆಫ್ ದಿ ರಿಪಬ್ಲಿಕ್ ಆಫ್ ಟ್ರಿನಿಡಾಡ್ ಮತ್ತು ಟೊಬಾಗೋ' ಅನ್ನು ಘೋಷಿಸಿದೆ. ಈ ಘೋಷಣೆಯನ್ನು ಪ್ರಧಾನಮಂತ್ರಿ ಕಮಲಾ ಪ್ರಸಾದ್ ಬಿಸ್ಸೆಸ್ಸರ್ ಅವರು ಭಾರತೀಯ ಸಮುದಾಯದ ಸಮ್ಮುಖದಲ್ಲಿ ಪ್ರಕಟಿಸಿದರು.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ದೇಶದ ಜನತೆ ಹಾಗೂ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಅಲ್ಲಿನ ಭಾರತೀಯ ಮೂಲದ ಆರನೇ ತಲೆಮಾರಿಗೂ ಈಗ ಒಸಿಐ ಕಾರ್ಡ್ ನೀಡಲಾಗುವುದಾಗಿ ತಿಳಿಸಿದರು.

ಅವರು ತಮ್ಮ ಭಾಷಣದಲ್ಲಿ ಭಾರತೀಯ ವಲಸಿಗರ ಐತಿಹಾಸಿಕ ಪಾರಂಪರ್ಯ, ಸಾಂಸ್ಕೃತಿಕ ಶಕ್ತಿ ಮತ್ತು ಸಮಾಜದಲ್ಲಿ ಅವರ ಪಾತ್ರವನ್ನು ಶ್ಲಾಘಿಸಿದರು. ಭಾರತೀಯ ಆರ್ಥಿಕ ಪ್ರಗತಿ, ಡಿಜಿಟಲ್ ತಂತ್ರಜ್ಞಾನ, ಹಸಿರು ಇಂಧನ ಹಾಗೂ ಎಐ ಕ್ಷೇತ್ರದ ಸಾಧನೆಗಳನ್ನು ವಿವರಿಸಿದರು.

ಈ ಐತಿಹಾಸಿಕ ಭೇಟಿಯಲ್ಲಿ ಭಾರತ-ಟ್ರಿನಿಡಾಡ್ ನಡುವಿನ ಸಂಬಂಧ ಬಲವರ್ಧನೆಗೊಂಡಿದೆ. 1999ರ ನಂತರ ಇದು ಭಾರತದ ಪ್ರಧಾನಿ ಅವರ ಪ್ರಥಮ ದ್ವಿಪಕ್ಷೀಯ ಭೇಟಿಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande