ಶಿಕ್ಷಣ ಜೊತೆ ಕೌಶಲ್ಯ ಇದ್ದಲ್ಲಿ ಸಾಧನೆ ಸಾಧ್ಯ : ಪಟ್ಟಣಶೆಟ್ಟಿ
ವಿಜಯಪುರ, 30 ಜುಲೈ (ಹಿ.ಸ.) : ಆ್ಯಂಕರ್ : ವಿದ್ಯಾರ್ಥಿಗಳು ಕೇವಲ ಪಠ್ಯದೊಂದಿಗೆ ಶಿಕ್ಷಣವಂತರಾಗದೇ ವಿವಿಧ ಕೌಶಲ್ಯಗಳನ್ನು ಮೈಗೂಡಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಉಪನಿರ್ದೇಶಕ ಶಿವಾನಂದ ಪಟ್ಟಣಶೆಟ್ಟಿ ಹೇಳಿದರು. ನವನಗರದ ಮೊರಾರ್ಜಿ ಶಾಲೆ
ಡಿಡಿಪಿಐ


ವಿಜಯಪುರ, 30 ಜುಲೈ (ಹಿ.ಸ.) :

ಆ್ಯಂಕರ್ : ವಿದ್ಯಾರ್ಥಿಗಳು ಕೇವಲ ಪಠ್ಯದೊಂದಿಗೆ ಶಿಕ್ಷಣವಂತರಾಗದೇ ವಿವಿಧ ಕೌಶಲ್ಯಗಳನ್ನು ಮೈಗೂಡಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಉಪನಿರ್ದೇಶಕ ಶಿವಾನಂದ ಪಟ್ಟಣಶೆಟ್ಟಿ ಹೇಳಿದರು.

ನವನಗರದ ಮೊರಾರ್ಜಿ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಅಲ್ಪಸಂಖ್ಯಾತರ ಬಹುವಲಯ ಅಭಿವೃದ್ಧಿ (ಎಂ.ಎಸ್.ಡಿ.ಪಿ) ಯೋಜನೆಯಡಿ ೧೦ ದಿನಗಳ ಕಾಲ ಜರುಗಿದ ಮೃದು ಕೌಶಲ್ಯ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಪ್ರಮಾಣ ಪತ್ರ ಪಡೆಯಲು ಶಿಕ್ಷಣವಂತರಾಗದೇ ನಿಮ್ಮಲ್ಲಿರುವ ಅಗಾಧ ಪ್ರತಿಭೆ ಬಳಸಿಕೊಂಡು ಕೌಶಲ್ಯ ತರಬೇತಿ ಪಡೆದುಕೊಂಡಾಗ ಉದ್ಯೋಗಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದರು.

ಇತ್ತೀಚೆಗೆ ಹಲವಾರು ಕ್ಷೇತ್ರಗಳಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಹೆಚ್ಚಾಗಿದ್ದು, ಒಂದು ಸ್ಮಾರ್ಟ್ ಫೋನ್ ನಿಂದ ಇಂದು ಒಬ್ಬ ನೌಕರ ಸಂಪಾದಿಸುವಷ್ಟು ಹಣ ಪಡೆದುಕೊಳ್ಳಬಹುದಾಗಿದೆ. ಉದ್ಯೋಗಿಗಳು ದಂಪತಿ ಸಮೇತ ಕಾರ್ಯ ನಿರ್ವಹಿಸುತ್ತಿರುವುದರಿಂದ ಮನೆಯಲ್ಲಿ ಶುಭ ಕಾರ್ಯಗಳು ಬಂದಾಗ ಕೌಶಲ್ಯಗಳಾದ ಡೇಕೋರೇಶನ್, ಹೂಗುಚ್ಛ, ಸೌಂದರ್ಯ ವರ್ಧಕ, ಮೆಹಂದಿ, ನಿರೂಪಣೆ ಮುಂತಾದ ಕೌಶಲ್ಯ ತಮ್ಮಲ್ಲಿದ್ದಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಅವುಗಳನ್ನು ಬಳಸಿಕೊಂಡು ಹಣ ಸಂಪಾದಿಸಬಹುದು. ವಿದ್ಯಾರ್ಥಿ ಜೀವನದಲ್ಲಿ ಸಿಕ್ಕಂತಹ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande