ಕೋಲಾರ, ೩೦ ಜುಲೈ : (ಹಿ.ಸ.) :
ಆ್ಯಂಕರ್ : ದೇಶದ ಬೆನ್ನೆಲುಬಾದ ರೈತರ ಭವಿಷ್ಯವನ್ನು ಸುದೃಢಗೊಳಿಸಿ ರೈತರು ಆದಾಯ ದ್ವೀಗುಣ ಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉಚಿತವಾಗಿ ಕೃಷಿ ಆಧಾರಿತ ಸಾಮಾಗ್ರಿಗಳನ್ನು ನೀಡಲಾಗುತ್ತಿದೆ ಹಾಗೂ ರೈತರ ಸದೃಢ ಭವಿಷ್ಯಕ್ಕಾಗಿ ಜೈವಿಕ ಕೀಟನಾಶಕ ಸಾಮಗ್ರಿಗಳನ್ನು ಬಳಸಿ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ಬಂಗಾರಪೇಟೆ ಪಟ್ಟಣದ ವಿ.ಬಿ.ಆರ್ ಕಲ್ಯಾಣ ಮಂಟಪದಲ್ಲಿ ಭಾರತೀಯ ಕೃಷಿ ಅನುಸಂದಾನ ಪರಿಷತ್, ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ ಬೆಂಗಳೂರು ಮತ್ತು ಕೃಷಿ ವಿಜ್ಞಾನ ಕೇಂದ್ರ ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ ಉಪಯೋಜನೆಯ ಜೈವಿಕ ಕೀಟ ನಿಯಂತ್ರಣ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.
ಜೈವಿಕ ಕೀಟ ನಿಯಂತ್ರಣವು ರಾಸಾಯನಿಕ ಕೀಟನಾಶಕಗಳಿಗೆ ಹೋಲಿಸಿದರೆ ಪರಿಸರ ಸ್ನೇಹಿ ಮತ್ತು ಸುರಕ್ಷಿತ ವಿಧಾನವಾಗಿದೆ. ಇದು ಕೀಟಗಳ ನೈಸರ್ಗಿಕ ಶತ್ರುಗಳನ್ನು ಬಳಸಿ ಕೀಟಗಳ ಹಾವಳಿಯನ್ನು ನಿಯಂತ್ರಿಸುತ್ತದೆ. ಹಾಗೂ ರೈತರು ತಜ್ಞರೊಂದಿಗೆ ಸಂವಹನ ನಡೆಸ ಬಹುದು ಮತ್ತು ತಮ್ಮ ಜಮೀನಿನಲ್ಲಿ ಜೈವಿಕ ಕೀಟ ನಿಯಂತ್ರಣವನ್ನು ಹೇಗೆ ಅಳವಡಿಸಿ ಕೊಳ್ಳಬೇಕೆಂದು ತಿಳಿಯಬಹುದು ಎಂದರು.
ರೈತರನ್ನು ಮಧ್ಯವರ್ತಿಗಳ ಉಪಟ್ಟಳದಿಂದ ಮುಕ್ತಿಗೊಳಿಸಲು ಹಾಗೂ ತಾವು ಬೆಳೆದ ಸಾಮಗ್ರಿಗಳಿಗೆ ಬೆಲೆ ನಿಗದಿ ಪಡಿಸಲು ರೈತ ಉತ್ಪಾದನಾ ಸಂಘಗಳು ಶಕ್ತಿ ತುಂಬುತ್ತದೆ ಆದರಿಂದ ಹೆಚ್ಚು ಹೆಚ್ಚು ಸಂಘಗಳು ಸ್ಥಾಪನೆಯಾಗಬೇಕು ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು ವಂಚಿಸಿದೆ, ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ೨ ಸಾವಿರ ನೀಡಲಾಗುತ್ತಿತ್ತು ಆದರೆ ಕಾಂಗ್ರೇಸ್ ಅಧಿಕಾರಕ್ಕೆ ಬಂದ ನಂತರ ಸ್ಥಗಿತ ಗೊಳಿಸಿ ರೈತ ವಿರೋಧಿ ಧೊರಣೆ ಅನುಸರಿಸಿತು, ಹಾಗೂ ಹಾಲು ಉತ್ಪಾದಕರಿಗೆ ಬೆಂಬಲ ಬೆಲೆ ನೀಡದೆ ಮೀನಾಮೇಷ ಎನಿಸುತ್ತಿದೆ , ಮುಂಗಾರು ಪ್ರಾರಂಭವಾಗಿ ರಾದ್ಯದಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ಸಾಗಬೇಕಾಗಿತ್ತು ಆದರೆ ಕಾಂಗ್ರೆಸ್ ಸರ್ಕಾರ ಕೃತರ ರಸಗೊಬ್ಬರ ಅಭಾವ ಸೃಷ್ಟಿಸಿ ರೈತರಿಗೆ ಗೊಬ್ಬರ ನೀಡದೆ ಮೀನಾಮೇಷ ಎನಿಸುತ್ತಿದೆ ಎಂದರು.
ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆ ಜಾರಿಗೆ ತಂದು ಮಹಿಳೆಯರಿಗೆ ಎರಡು ಸಾವಿರ ರೂಪಾಯಿ ನೀಡಿ ದಿನನಿತ್ಯ ವಸ್ತುಗಳು, ಹಾಲು, ಕೃಷಿ ಪರಿಕರಗಳು, ನೋಂದಣಿ ಶುಲ್ಕ, ಗ್ಯಾಸ್, ಪೆಟ್ರೋಲ್ ಡಿಸೆಲ್, ವಿದ್ಯುತ್, ಜನನ ಮರಣ ಪ್ರಮಾಣಪತ್ರ ಒಳಗೊಂಡಂತೆ ಎಲ್ಲಾ ಬೆಲೆಗಳನ್ನು ಹೆಚ್ಚಲ ಮಾಡಿ ೧೦ ರಷ್ಟು ಹಣ ಪುರುಷರಿಂದ ವಸೂಲಿ ಮಾಡುತ್ತಿದ್ದಾರೆ, ರಾಜ್ಯಾದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಹಾಗೂ ನಿರುದ್ಯೋಗಿ ಯುವಕರಿಗೆ ೩೦೦೦ ಸಾವಿರ ನೀಡುವುದಾಗಿ ಹುಸಿ ಭರವಸೆ ನೀಡಿ ಮಂಕುಬೂದಿ ಎರಚಿದೆ ಎಂದು ಆಕ್ರೋಶ ಹೊರಹಾಕಿದರು.
ಸಂದರ್ಭದಲ್ಲಿ ನಿರ್ದೇಶಕರಾದ ಸುಶೀಲ್, ಪುರಸಭಾ ಸದಸ್ಯ ಕಪಾಲಿ ಶಂಕರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೊಸ ರಾಯಪ್ಪ, ಕಾರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣ ಸ್ವಾಮಿ, ದಲಿತ ಮುಖಂಡ ರಾಜಪ್ಪ, ಜೆ.ಶ್ರೀನಿವಾಸ್, ವಿಜ್ಞಾನಿಗಳಾದ ಸಾಗರ್ ಪ್ರಭು ಗುಂಡಪ್ಪ ಬಿ.ನಾರಾಯಣಪ್ಪ, ಇತರರು ಉಪಸ್ಥಿತರಿದ್ದರು.
ಚಿತ್ರ : ಬಂಗಾರಪೇಟೆ ಪಟ್ಟಣದ ವಿ.ಬಿ.ಆರ್ ಕಲ್ಯಾಣ ಮಂಟಪದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಯ ಜೈವಿಕ ಕೀಟ ನಿಯಂತ್ರಣ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಎಸ್ .ಮುನಿಸ್ವಾಮಿ ಮಾತನಾಡಿದರು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್