ಅತಿಥಿ ಉಪನ್ಯಾಸಕರ ಕರಾಳ ಅಧಿಸೂಚನೆ ರದ್ದತಿಗೆ ಆಗ್ರಹ
ಬಳ್ಳಾರಿ, 03 ಜುಲೈ (ಹಿ.ಸ.) : ಆ್ಯಂಕರ್ : ಅತಿಥಿ ಉಪನ್ಯಾಸಕರ ಕುರಿತು ಕರ್ನಾಟಕ ಸರ್ಕಾರ ಜೂನ್ 25, 2024 ರಂದು ಪ್ರಕಟಿಸಿರುವ ಅಧಿಸೂಚನೆಯನ್ನು ತಕ್ಷಣವೇ ರದ್ದು ಪಡಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಆಗ್ರಹಿಸಿದೆ. ಕರ್ನಾಟಕ ರಾಜ್ಯ ಸ
ಅತಿಥಿ ಉಪನ್ಯಾಸಕರ ಕರಾಳ ಅಧಿಸೂಚನೆ ರದ್ದತಿಗೆ ಆಗ್ರಹ : ಅತಿಥಿ ಉಪನ್ಯಾಸಕರ ಸಂಘ


ಅತಿಥಿ ಉಪನ್ಯಾಸಕರ ಕರಾಳ ಅಧಿಸೂಚನೆ ರದ್ದತಿಗೆ ಆಗ್ರಹ : ಅತಿಥಿ ಉಪನ್ಯಾಸಕರ ಸಂಘ


ಬಳ್ಳಾರಿ, 03 ಜುಲೈ (ಹಿ.ಸ.) :

ಆ್ಯಂಕರ್ : ಅತಿಥಿ ಉಪನ್ಯಾಸಕರ ಕುರಿತು ಕರ್ನಾಟಕ ಸರ್ಕಾರ ಜೂನ್ 25, 2024 ರಂದು ಪ್ರಕಟಿಸಿರುವ ಅಧಿಸೂಚನೆಯನ್ನು ತಕ್ಷಣವೇ ರದ್ದು ಪಡಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಆಗ್ರಹಿಸಿದೆ.

ಕರ್ನಾಟಕ ರಾಜ್ಯ ಸರ್ಕಾರ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಡಾ. ಟಿ. ದುರುಗಪ್ಪ ಅವರ ನೇತೃತ್ವದಲ್ಲಿ ಅತಿಥಿ ಉಪನ್ಯಾಸಕರು ಪತ್ರಕರ್ತರ ಜೊತೆ ಗುರುವಾರ ಮಾತನಾಡಿ,

ಕರ್ನಾಟಕದ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024 ಮತ್ತು 25ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನು ಯಾವುದೇ ತಾರತಮ್ಯ ಮಾಡದೆ ಯಥಾಸ್ಥಿತಿಯಲ್ಲಿ ಕರ್ತವದಲ್ಲಿ ಮುಂದುವರಿಸಬೇಕು ಎಂದರು.

ವಯೋ ನಿವೃತ್ತಿ ಅಂಚಿನಲ್ಲಿರುವ ಅತಿಥಿ ಉಪನ್ಯಾಸಕರಿಗೆ ತಲಾ 20 ಲಕ್ಷ ರೂಪಾಯಿಗಳ ಇಡುಗಂಟನ್ನು ಮತ್ತು ಸೇವಾ ಭದ್ರತೆಯನ್ನು ನೀಡಬೇಕು. ಬೇರೆ ರಾಜ್ಯಗಳಲ್ಲಿರುವ ಅತಿಥಿ ಉಪನ್ಯಾಸಕರಿಗೆ 65 ರಿಂದ 67 ಸಾವಿರ ರೂಪಾಯಿಗಳವರೆಗೆ ವೇತನವನ್ನು ಪಾವತಿ ಮಾಡಲಾಗುತ್ತಿದೆ. ಆರೋಗ್ಯ ವಿಮೆ, ಜೀವ ವಿಮೆ, ಪ್ರಾವಿಡೆಂಟ್ ಫಂಡ್ ಸೇರಿ ವಿವಿಧ ಸೌಲಭ್ಯಗಳನ್ನು ನೀಡಬೇಕು ಎಂದರು.

ಬಳ್ಳಾರಿಯ ಸತೀಶ್ಚಂದ್ರ ಸರಳಾದೇವಿ ಅಗರವಾಲ್ ಕಾಲೇಜಿನಲ್ಲಿ 33 ಖಾಯಂ ಉಪನ್ಯಾಸಕರಿದ್ದು 110 ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಕಾಲೇಜು ರಾಷ್ಟ್ರಮಟ್ಟದಲ್ಲಿ ಯುಜಿಸಿಯ ಏಳನೇ ಸ್ಥಾನವನ್ನು ಪಡೆದುಕೊಂಡಿದೆ. ಕಾಲೇಜು ಶೈಕ್ಷಣಿಕವಾಗಿ ಮತ್ತು ಪಠ್ಯಾತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ರೂಪುಗೊಳಿಸುತ್ತಿದ್ದು ಕಾಲೇಜಿನ ಅತಿಥಿ ಉಪನ್ಯಾಸಕ ಕೊಡುಗೆ ಅಮೂಲ್ಯವಾದದ್ದು ಎಂದರು.

ಉಪನ್ಯಾಸಕರಿಗೆ ಬೋಧನೆ ಮಾಡುವ ಕಾರ್ಯಭಾರ ಹಂಚಿಕೆ, ಯುಜಿಸಿ ಮತ್ತು ನಾನ್ ಯುಜಿಸಿ ಎಂಬ ತಾರತಮ್ಯ ಕೈಬಿಟ್ಟು ಹೈಕೋರ್ಟ್‍ನ ಧಾರವಾಡ ವಿಭಾಗೀಯ ಪೀಠ ಆದೇಶ ಮಾಡಿರುವಂತೆ ಹತ್ತು ವರ್ಷಗಳ ಕಾಲ ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವವರ ಸೇವೆಯನ್ನು ಖಾಯಂ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಸರ್ಕಾರ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದದ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಡಿ. ಸಿದ್ದೇಶ್, ಸಹ ಕಾರ್ಯದರ್ಶಿ ಟಿ. ರುದ್ರಮುನಿ, ಪದಾಧಿಕಾರಿಗಳಾದ ಟಿ. ಜಯರಾಮ್, ಶಿವಕುಮಾರ್ ಅಂಗಡಿ, ಸಂದ್ಯಾಬಾಯಿ, ರಾಜಲಕ್ಷ್ಮಿ, ಶೋಭಾಜ್ಯೋತಿ, ಗುರುರಾಜ್, ರಮೇಶ್, ರಫಿ, ರಾಮಣ್ಣ, ಬಾಲಚಂದ್ರ ಎರಿಸ್ವಾಮಿ ಸೇರಿ ಅನೇಕ ಸದಸ್ಯರು ಈ ಸಂದರ್ಭದಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande