ರೈಲುಗಳ ತಾತ್ಕಾಲಿಕ ಮಾರ್ಗ ಬದಲಾವಣೆ, ನಿಯಂತ್ರಣ ಮತ್ತು ಮರುನಿಗದಿ
ಹುಬ್ಬಳ್ಳಿ, 03 ಜುಲೈ (ಹಿ.ಸ.) : ಆ್ಯಂಕರ್ : ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಕಾಲುವೆ ದಾಟುವ ಕಾಮಗಾರಿ ಹೊನ್ನಾವಳ್ಳಿ ರೋಡ್ – ಅರಸೀಕೆರೆ ನಿಲ್ದಾಣಗಳ ನಡುವೆ ನಡೆಯುತ್ತಿರುವುದರಿಂದ, ಕೆಳಕಂಡ ರೈಲುಗಳ ಮಾರ್ಗ ಬದಲಾವಣೆ, ನಿಯಂತ್ರಣ ಮತ್ತು ಮರುನಿಗದಿ ಪಡಿಸಲಾಗಿದೆ. *I. ರೈಲುಗಳ ಮಾರ್ಗ ಬದಲಾವಣೆ:* 1.
ರೈಲುಗಳ ತಾತ್ಕಾಲಿಕ ಮಾರ್ಗ ಬದಲಾವಣೆ, ನಿಯಂತ್ರಣ ಮತ್ತು ಮರುನಿಗದಿ


ಹುಬ್ಬಳ್ಳಿ, 03 ಜುಲೈ (ಹಿ.ಸ.) :

ಆ್ಯಂಕರ್ : ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಕಾಲುವೆ ದಾಟುವ ಕಾಮಗಾರಿ ಹೊನ್ನಾವಳ್ಳಿ ರೋಡ್ – ಅರಸೀಕೆರೆ ನಿಲ್ದಾಣಗಳ ನಡುವೆ ನಡೆಯುತ್ತಿರುವುದರಿಂದ, ಕೆಳಕಂಡ ರೈಲುಗಳ ಮಾರ್ಗ ಬದಲಾವಣೆ, ನಿಯಂತ್ರಣ ಮತ್ತು ಮರುನಿಗದಿ ಪಡಿಸಲಾಗಿದೆ.

*I. ರೈಲುಗಳ ಮಾರ್ಗ ಬದಲಾವಣೆ:*

1. ಜುಲೈ 3, 10, 17, 24 ರಂದು ಟಾಟಾನಗರದಿಂದ ಹೊರಡುವ ರೈಲು ಸಂಖ್ಯೆ 18111 ಟಾಟಾನಗರ–ಯಶವಂತಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು, ಅರಸೀಕೆರೆ, ಹಾಸನ, ನೆಲಮಂಗಲ, ಚಿಕ್ಕಬಾಣಾವರ ಮಾರ್ಗವಾಗಿ ಯಶವಂತಪುರ ತಲುಪಲಿದೆ. ಈ ಪ್ರಯಾಣದಲ್ಲಿ ಈ ರೈಲು ತುಮಕೂರಿಗೆ ನಿಲುಗಡೆ ಇರುವುದಿಲ್ಲ.

2. ಜುಲೈ 8, 15, 22 ರಂದು ಬನಾರಸ್ನಿಂದ ಹೊರಡುವ ರೈಲು ಸಂಖ್ಯೆ 07324 ಬನಾರಸ್ – ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು ಯಲಹಂಕ, ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದ್ದು, ತುಮಕೂರಿಗೆ ನಿಲುಗಡೆ ಇರುವುದಿಲ್ಲ.

3. ಜುಲೈ 4, 7, 9, 11, 14, 16, 18, 21, 23, 25 ರಂದು ವಾಸ್ಕೋ ಡ ಗಾಮದಿಂದ ಹೊರಡುವ ರೈಲು ಸಂಖ್ಯೆ 17310 ವಾಸ್ಕೋ ಡ ಗಾಮ – ಯಶವಂತಪುರ ದೈನಂದಿನ ಎಕ್ಸ್ ಪ್ರೆಸ್ ರೈಲು ಅರಸೀಕೆರೆ, ಹಾಸನ, ನೆಲಮಂಗಲ ಮಾರ್ಗವಾಗಿ ಯಶವಂತಪುರ ತಲುಪಲಿದೆ. ಇದು ತಿಪಟೂರು ಮತ್ತು ತುಮಕೂರಿಗೆ ನಿಲುಗಡೆ ಇರುವುದಿಲ್ಲ.

4. ಜುಲೈ 5, 8, 10, 12, 15, 17, 19, 22, 24, 26 ರಂದು ಹೊರಡುವ ರೈಲು ಸಂಖ್ಯೆ 20652 ತಾಳಗುಪ್ಪ – ಕೆಎಸ್ಆರ್ ಬೆಂಗಳೂರು ದೈನಂದಿನ ಎಕ್ಸ್ ಪ್ರೆಸ್ ಅರಸೀಕೆರೆ, ಹಾಸನ, ನೆಲಮಂಗಲ ಮಾರ್ಗವಾಗಿ ಯಶವಂತಪುರ ತಲುಪಲಿದೆ. ಇದು ತಿಪಟೂರು ಮತ್ತು ತುಮಕೂರಿಗೆ ನಿಲುಗಡೆ ಇರುವುದಿಲ್ಲ.

*II. ರೈಲುಗಳ ನಿಯಂತ್ರಣ:*

1. ರೈಲು ಸಂಖ್ಯೆ 16239 ಚಿಕ್ಕಮಗಳೂರು–ಯಶವಂತಪುರ ದೈನಂದಿನ ಎಕ್ಸ್ ಪ್ರೆಸ್ ಜುಲೈ 5, 8, 10, 12, 15, 17, 19, 22, 24 ಮತ್ತು 26, 2025 ರಂದು ಮಾರ್ಗಮಧ್ಯೆ 45 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

2. ರೈಲು ಸಂಖ್ಯೆ 12726 ಧಾರವಾಡ–ಕೆ ಎಸ್ ಆರ್ ಬೆಂಗಳೂರು ದೈನಂದಿನ ಎಕ್ಸ್ ಪ್ರೆಸ್ ಜುಲೈ 5, 8, 10, 12, 15, 17, 19, 22, 24 ಮತ್ತು 26, 2025 ರಂದು ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

3. ರೈಲು ಸಂಖ್ಯೆ 66577 ತುಮಕೂರು–ಶಿವಮೊಗ್ಗ ಟೌನ್ ಮೆಮು ಜುಲೈ 5, 8, 10, 12, 15, 17, 19, 22, 24 ಮತ್ತು 26, 2025 ರಂದು ಮಾರ್ಗಮಧ್ಯೆ 75 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

4. ರೈಲು ಸಂಖ್ಯೆ 17326 ಮೈಸೂರು–ಬೆಳಗಾವಿ ವಿಶ್ವಮಾನವ ದೈನಂದಿನ ಎಕ್ಸ್ ಪ್ರೆಸ್ ಜುಲೈ 5, 8, 10, 12, 15, 17, 19, 22, 24 ಮತ್ತು 26, 2025 ರಂದು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

*III. ರೈಲಿನ ಮರುನಿಗದಿ:*

1. ರೈಲು ಸಂಖ್ಯೆ 56224 ಅರಸೀಕೆರೆ-ಕೆಎಸ್ಆರ್ ಬೆಂಗಳೂರು ದೈನಂದಿನ ಪ್ಯಾಸೆಂಜರ್ ರೈಲು ಜುಲೈ 5, 8, 10, 12, 15, 17, 19, 22, 24, 26 ರಂದು ಅರಸೀಕೆರೆಯಿಂದ 60 ನಿಮಿಷ ತಡವಾಗಿ ಹೊರಡಲಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande