ಆರ್‌ಎಸ್‌ಎಸ್ ಶತಮಾನೋತ್ಸವ ಸಿದ್ಧತೆ: ನಾಳೆ ದೆಹಲಿಯಲ್ಲಿ ಪ್ರಾಂತೀಯ ಪ್ರಚಾರಕ ಸಭೆ
ನವದೆಹಲಿ, 03 ಜುಲೈ (ಹಿ.ಸ.) : ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ವಾರ್ಷಿಕ ಅಖಿಲ ಭಾರತ ಪ್ರಾಂತೀಯ ಪ್ರಚಾರಕ ಸಭೆ ನಾಳೆಯಿಂದ 6 ರವರೆಗೆ ನವದೆಹಲಿಯ ಕೇಶವಕುಂಜ್ ಕಚೇರಿಯಲ್ಲಿ ನಡೆಯಲಿದೆ. ಶತಮಾನೋತ್ಸವ ವರ್ಷ (2025-26)ಕ್ಕೆ ಪೂರ್ವಸಿದ್ಧತೆಗಳ ಕುರಿತು ಈ ಸಭೆಯ ಕೇಂದ್ರ ಬಿಂದು ಆಗಲ
Rss


ನವದೆಹಲಿ, 03 ಜುಲೈ (ಹಿ.ಸ.) :

ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ವಾರ್ಷಿಕ ಅಖಿಲ ಭಾರತ ಪ್ರಾಂತೀಯ ಪ್ರಚಾರಕ ಸಭೆ ನಾಳೆಯಿಂದ 6 ರವರೆಗೆ ನವದೆಹಲಿಯ ಕೇಶವಕುಂಜ್ ಕಚೇರಿಯಲ್ಲಿ ನಡೆಯಲಿದೆ. ಶತಮಾನೋತ್ಸವ ವರ್ಷ (2025-26)ಕ್ಕೆ ಪೂರ್ವಸಿದ್ಧತೆಗಳ ಕುರಿತು ಈ ಸಭೆಯ ಕೇಂದ್ರ ಬಿಂದು ಆಗಲಿದೆ.

ಸಂಘದ ಶತಮಾನೋತ್ಸವ ವಿಜಯದಶಮಿ 2025ರಿಂದ ಆರಂಭವಾಗಲಿದ್ದು 2026ರ ವಿಜಯದಶಮಿವರೆಗೆ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ಸಂಘದ ದೇಶವ್ಯಾಪಿ ಕಾರ್ಯಕ್ರಮಗಳು, ಪ್ರಚಾರ ಯೋಜನೆಗಳು ಮತ್ತು ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ನಿರ್ಧಾರವಾಗಲಿದೆ.

233ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು, ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು ಮತ್ತು ಸಂಘಟನಾ ಸಚಿವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಸೇರಿದಂತೆ ಪ್ರಮುಖ ಮುಖಂಡರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಈ ಕುರಿತು ಆರ್‌ಎಸ್‌ಎಸ್ ಅಖಿಲ ಭಾರತ ಪ್ರಚಾರ ಮುಖ್ಯಸ್ಥ ಸುನೀಲ್ ಅಂಬೇಕರ್ ಮಾಹಿತಿ ನೀಡಿದ್ದು, 2024ರ ಮಾರ್ಚ್ ಮತ್ತು ಜೂನ್ ನಡುವೆ “ ಆರ್‌ಎಸ್‌ಎಸ್” ಅಭಿಯಾನದ ಮೂಲಕ 28,571 ಹೊಸ ಜನ ಸಂಪರ್ಕಕ್ಕೆ ಬಂದಿದ್ದಾರೆ. ಜೊತೆಗೆ, ದೇಶದಾದ್ಯಂತ 100 ತರಬೇತಿ ಶಿಬಿರಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

ಶತಮಾನೋತ್ಸವ ವರ್ಷದಲ್ಲಿ ವಿಶೇಷ ಕಾರ್ಯಕ್ರಮಗಳು:

ಹಿಂದೂ ಸಮ್ಮೇಳನಗಳು, ಸಾಮಾಜಿಕ ಸಾಮರಸ್ಯ ಸಭೆಗಳು, ನಾಗರಿಕ ವಿಚಾರ ಸಂಕಿರಣಗಳು

ಮಹಾನಗರಗಳಲ್ಲಿ (ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತಾ) ಸರಸಂಘಚಾಲಕರಿಂದ ವಿಶೇಷ ಸಂವಾದ

20 ದಿನಗಳ ಗೃಹ ಸಂಪರ್ಕ ಅಭಿಯಾನ – ಮನೆಯ ಮನೆಗೆ ತೆರಳಿ ಜನಜಾಗೃತಿ

ಈ ಸಭೆಯಲ್ಲಿ ನಿಗದಿಯಾಗುವ ನಿರ್ಧಾರಗಳು ಸಂಘದ ಮುಂದಿನ ದಿಕ್ಕು, ಕಾರ್ಯಪಥ ಮತ್ತು ಸಮಾಜದೊಂದಿಗೆ ಸಂಪರ್ಕ ಬಲಪಡಿಸಲು ಬಹುಮುಖ್ಯವಾಗಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande