ಬಳ್ಳಾರಿ, 03 ಜುಲೈ (ಹಿ.ಸ.) :
ಆ್ಯಂಕರ್ : ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರು ನಾಳೆ ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಯವರು ತಿಳಿಸಿದ್ದಾರೆ.
ನಾಳೆ ವಿಜಯನಗರ ಜಿಲ್ಲೆಯಿಂದ ಬಳ್ಳಾರಿಗೆ ಆಗಮಿಸಿ, ಬೆಳಿಗ್ಗೆ 11.15 ಕ್ಕೆ ನಗರದ ಗಾಂಧಿನಗರ ಬಡಾವಣೆಯ 1 ನೇ ಕ್ರಾಸ್‍ನ ಮಹಿಳಾ ಕಾಲೇಜು ರಸ್ತೆಯ ವಾರ್ಡ್ ನಂ.21ರ ಬ್ಲಾಕ್ ನಂ.17 ರ ಸಿಟಿ ಕಾರ್ಪೋರೇಷನ್‍ನ ಕೆಳಮಹಡಿಯಲ್ಲಿ ಶಶಿಕಿರಣ ಕ್ರೆಡಿಟ್ ಸೌಹರ್ದ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‍ನ ಬಳ್ಳಾರಿಯ ನೂತನ ಶಾಖೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಬಳಿಕ ಮಧ್ಯಾಹ್ನ 02 ಗಂಟೆಗೆ ರಸ್ತೆಯ ಮೂಲಕ ಕೊಪ್ಪಳ ಜಿಲ್ಲೆಗೆ ಪ್ರಯಾಣಿಸುವರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್