ಕೊಪ್ಪಳ, 03 ಜುಲೈ (ಹಿ.ಸ.) :
ಆ್ಯಂಕರ್ : ಮೀನುಗಾರಿಕೆ ಇಲಾಖೆ ಗಂಗಾವತಿ ಕಚೇರಿಯಿಂದ 2025-26ನೇ ಸಾಲಿನ ರಾಜ್ಯ ವಲಯದ ಯೋಜನೆಗಳಡಿ ಸಹಾಯಧನ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಯಡಿ ಕೆರೆ ಅಥವಾ ಜಲಾಶಯ ಅಂಚಿನಲ್ಲಿ ನಿರ್ಮಿಸಿರುವ ಮೀನುಮರಿ ಪಾಲನಾ ಕೊಳಗಳಲ್ಲಿ ಮೀನುಮರಿಗಳನ್ನು ಪಾಲನೆ ಮಾಡಲು, ಮೀನುಮರಿಗಳನ್ನು ಖರೀದಿಸಿದ್ದಕ್ಕಾಗಿ ಸಹಾಯಧನ ನೀಡಲಾಗುವುದು ಹಾಗೂ ಮೀನುಗಾರಿಕೆ ಸಲಕರಣೆ ಕಿಟ್‍ಗಳಿಗಾಗಿ ಮತ್ತು ಜಿಲ್ಲಾ ಪಂಚಾಯತ ಯೋಜನೆಯಡಿ ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ, ಮೀನು ಮಾರುಕಟ್ಟೆಗೆ ಹೊಸದಾಗಿ ದ್ವಿಚಕ್ರ, ತ್ರಿಚಕ್ರ ವಾಹನ ಮತ್ತು ಐಸ್ ಬಾಕ್ಸ್ ಖರೀದಿಗೆ ಸಹಾಯ ಹಾಗೂ ಶೈಕ್ಷಣಿಕ ತರಬೇತಿ ಮತ್ತು ಪ್ರದರ್ಶನಕ್ಕಾಗಿ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.
ಮಹಿಳೆಯರಿಗೆ ಶೇ.33, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.24.1 ಹಾಗೂ ಅಲ್ಪಸಂಖ್ಯಾತರಿಗೆ ಶೇ.15 ರ ಅನುಪಾತದಲ್ಲಿ ಗುರಿ ನಿಗದಿಯಾಗಿದ್ದು, ಯೋಜನೆಯಡಿ ಸರ್ಕಾರದ ಮಾರ್ಗಸೂಚಿಯನ್ವಯ ಲಭ್ಯವಿರುವ ಅನುದಾನದ ಮೇರೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.
ಗಂಗಾವತಿ, ಕಾರಟಗಿ ಹಾಗೂ ಕನಕಗಿರಿ ತಾಲೂಕುಗಳ ಅರ್ಹ ಮತ್ತು ಆಸಕ್ತ ಮೀನುಗಾರರು ಹಾಗೂ ಮೀನುಗಾರರ ಸಹಕಾರ ಸಂಘಗಳ ಅಥವಾ ಎಫ್.ಎಫ್.ಪಿ.ಒ(ಸಂಸ್ಥೆ) ಸದಸ್ಯರು ಜುಲೈ 15 ರೊಳಗೆ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು, ಗಂಗಾವತಿ ಕಛೇರಿಗೆ ಅರ್ಜಿಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಗಂಗಾವತಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಗಂಗಾವತಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್