ಜಾರ್ಖಂಡ್‌ನಲ್ಲಿ ಮೂವರು ಜೆಜೆಎಂಪಿ ಉಗ್ರರ ಹತ್ಯೆ
ಗುಮ್ಲಾ, 26 ಜುಲೈ (ಹಿ.ಸ.) : ಆ್ಯಂಕರ್ : ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಘಾಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಲಾವಾ ದಾಗ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆ ಜಾರ್ಖಂಡ್ ಜನ ಮುಕ್ತಿ ಪರಿಷತ್ (ಜೆಜೆಎಂಪಿ)ಗೆ ಸೇರಿದ ಮೂವರು ಉಗ್ರ
Encounter


ಗುಮ್ಲಾ, 26 ಜುಲೈ (ಹಿ.ಸ.) :

ಆ್ಯಂಕರ್ : ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಘಾಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಲಾವಾ ದಾಗ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆ ಜಾರ್ಖಂಡ್ ಜನ ಮುಕ್ತಿ ಪರಿಷತ್ (ಜೆಜೆಎಂಪಿ)ಗೆ ಸೇರಿದ ಮೂವರು ಉಗ್ರರು ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾರೆ.

ಘಾಗ್ರಾ, ಬಿಷನ್‌ಪುರ ಹಾಗೂ ಗುಮ್ಲಾ ಠಾಣೆಗಳ ಪೊಲೀಸರು ಜಾರ್ಖಂಡ್ ಜಾಗ್ವಾರ್ ಸೈನಿಕರೊಂದಿಗೆ ಜಂಟಿಯಾಗಿ ಈ ಕಾರ್ಯಾಚರಣೆಯನ್ನು ನಡೆಸಿದ್ದು, ಸ್ಥಳದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರರು ಮೃತಪಟ್ಟಿದ್ದು, ಭದ್ರತಾ ಪಡೆಗಳು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿದ ಶಸ್ತ್ರಾಸ್ತ್ರಗಳಲ್ಲಿ ಒಂದು ಎಕೆ-47 ಹಾಗೂ ಎರಡು ಐಎನ್‌ಎಸ್‌ಎಎಸ್ ರೈಫಲ್‌ಗಳು ಸೇರಿವೆ.

ಗುಮ್ಲಾ ಎಸ್‌ಪಿ ಹರೀಶ್ ಬಿನ್ ಜಾಮಾ ಅವರು ನೀಡಿದ ಮಾಹಿತಿಯಂತೆ, ಜೆಜೆಎಂಪಿ ಕಮಾಂಡರ್ ದಿಲೀಪ್ ಲೋಹರಾ ಮತ್ತು ಅವರ ತಂಡ ಅರಣ್ಯದಲ್ಲಿ ಉಗ್ರರು ಇರುವ ಕುರಿತು ಖಚಿತ ಮಾಹಿತಿಯ ಆಧಾರವಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಪೊಲೀಸರು ಸುತ್ತುವರಿದ ಕೂಡಲೆ ಉಗ್ರರು ಗುಂಡು ಹಾರಿಸಲಾರಂಭಿಸಿದರು. ತಕ್ಷಣ ನಡೆದ ಪ್ರತಿಕಾರದಲ್ಲಿ ಮೂವರು ಉಗ್ರರು ಹತ್ಯೆಯಾದರು.

ಹತ್ಯೆಯಾದ ಉಗ್ರರಲ್ಲಿ ಒಬ್ಬನನ್ನು ಜೆಜೆಎಂಪಿಯ ಉಪ-ವಲಯ ಕಮಾಂಡರ್ ದಿಲೀಪ್ ಲೋಹರಾ ಎಂದು ಗುರುತಿಸಲಾಗಿದೆ. ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande