ನವದೆಹಲಿ, 26 ಜುಲೈ (ಹಿ.ಸ.) :
ಆ್ಯಂಕರ್ : ಬ್ರಿಟನ್ ಮತ್ತು ಮಾಲ್ಡೀವ್ಸ್ ಭೇಟಿಯಿಂದ ಹಿಂದಿರುಗಿದ ಕೂಡಲೇ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮಿಳುನಾಡಿಗೆ ಎರಡು ದಿನಗಳ ಅಧಿಕೃತ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ರಾಜ್ಯಕ್ಕೆ ₹4,800 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪ್ರಧಾನಿ ಮೋದಿ ಅವರು ಮೊದಲ ದಿನ ಟುಟಿಕೋರಿನ್ (ತುತಿಕೋಡಿ) ಜಿಲ್ಲೆಗೆ ಆಗಮಿಸಿ, ಸಂಜೆ 8 ಗಂಟೆಗೆ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಟುಟಿಕೋರಿನ್ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದು, ಪ್ರಾದೇಶಿಕ ಸಂಪರ್ಕ, ಲಾಜಿಸ್ಟಿಕ್ಸ್ ದಕ್ಷತೆ ಹಾಗೂ ಶುದ್ಧ ಇಂಧನ ಮೂಲಸೌಕರ್ಯಕ್ಕೆ ಸಂಬಂಧಿಸಿದ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ತಮಿಳುನಾಡು ಭೇಟಿಯ ಎರಡನೇ ದಿನವಾದ ಭಾನುವಾರ ತಿರುಚಿರಾಪಳ್ಳಿಯ ಗಂಗೈಕೊಂಡ ಚೋಳಪುರಂನಲ್ಲಿರುವ ಐತಿಹಾಸಿಕ ದೇವಸ್ಥಾನದಲ್ಲಿ ನಡೆಯುವ ಮಹಾನ್ ಚೋಳ ಚಕ್ರವರ್ತಿ ರಾಜೇಂದ್ರ ಚೋಳ ಪ್ರಥಮರ ಜನ್ಮದಿನಾಚರಣೆ ಹಾಗೂ ಆದಿ ತಿರುಆವತಿರ ಉತ್ಸವದಲ್ಲಿ ಪ್ರಧಾನ ಮಂತ್ರಿಗಳು ಭಾಗವಹಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa