ದ್ರಾಸ್, 26 ಜುಲೈ (ಹಿ.ಸ.) :
ಆ್ಯಂಕರ್ : ಪಾಕಿಸ್ತಾನ ಮೂಲದ ಭಯೋತ್ಪಾದನೆಗೆ ಭಾರತದಿಂದ ತೀವ್ರ ಪ್ರತಿಕ್ರಿಯೆ ನೀಡುತ್ತಿರುವ ಆಪರೇಷನ್ ಸಿಂಧೂರ್, ಭಯೋತ್ಪಾದನೆಗೆ ಬೆಂಬಲ ನೀಡುವವರನ್ನು ಸುಮ್ಮನೆ ಬಿಡಲಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಪಾಕಿಸ್ತಾನಕ್ಕೆ ನೀಡಿದೆ ಎಂದು ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.
ದ್ರಾಸನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿನ ಸಭೆಯಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಸೇನೆ ಮೇ 8 ಮತ್ತು 9ರಂದು ನಡೆಸಿದ ಸರ್ಜಿಕಲ್ ದಾಳಿಗಳಿಂದ ಪಾಕಿಸ್ತಾನದ ಒಂಬತ್ತು ಭಯೋತ್ಪಾದಕ ಅಡಗು ತಾಣಗಳನ್ನು ಯಾವುದೇ ನಷ್ಟವಿಲ್ಲದೆ ನಾಶಪಡಿಸಲಾಯಿತು ಎಂದು ವಿವರಿಸಿದರು.
ಇದು ಹೊಸ ಭಾರತ – ಶತ್ರುಗಳು ದಾಳಿ ಮಾಡಿದರೆ, ನಾವು ನಿರ್ಣಾಯಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ದ್ವಿವೇದಿ ಹೇಳಿದರು. ದೇಶದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಪ್ರಶ್ನಿಸುವ ಶಕ್ತಿಗೆ ಭಾರತೀಯ ಸೇನೆ ಸದಾ ತಕ್ಕ ಉತ್ತರ ನೀಡಲಿದೆ ಎಂದೂ ಅವರು ಹೇಳಿದರು.
ಭದ್ರತಾ ತಂತ್ರಜ್ಞಾನಗಳ ಬಗ್ಗೆ ಮಾತನಾಡಿದ ಅವರು, ಡ್ರೋನ್, ಕೌಂಟರ್ ಡ್ರೋನ್, ಲೋಯಿಟರ್ ಮದ್ದುಗುಂಡುಗಳಿಂದ ಸಜ್ಜಿತ ಶಕ್ತಿಬನ್ ರೆಜಿಮೆಂಟ್ ರಚನೆ, ಪ್ರತಿಯೊಂದು ದಳಕ್ಕೆ ಡ್ರೋನ್ ತುಕಡಿ ಸ್ಥಾಪನೆ, ಭೈರವ್ ಲೈಟ್ ಕಮಾಂಡೋ ಘಟಕದ ಅಭಿವೃದ್ಧಿ ಮುಂತಾದ ಹೂಡಿಕೆಯಿಂದ ಸೇನೆ ಶಕ್ತಿಶಾಲಿಯಾಗಿ ಬೆಳೆದಿದೆ ಎಂದು ಹೇಳಿದರು.
ಸೇನೆಯ ವಾಯು ರಕ್ಷಣಾ ವ್ಯವಸ್ಥೆಯನ್ನು ಸ್ಥಳೀಯ ಕ್ಷಿಪಣಿಗಳ ಮೂಲಕ ಇನ್ನಷ್ಟು ಬಲಗೊಳಿಸುವ ಯೋಜನೆಗಳಿವೆ. ರುದ್ರ ಬ್ರಿಗೇಡ್ ಸ್ಥಾಪನೆಯು ಭವಿಷ್ಯದ ಸಮರ ಶಕ್ತಿಗೆ ದಿಕ್ಕು ನೀಡಲಿದೆ ಎಂದೂ ಅವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa