ಕಾರ್ಗಿಲ್ ವಿಜಯ್ ದಿವಸ್ ಗಣ್ಯರಿಂದ ಸೈನಿಕರಿಗೆ ಗೌರವ ನಮನ
ನವದೆಹಲಿ, 26 ಜುಲೈ (ಹಿ.ಸ.) : ಆ್ಯಂಕರ್ : 1999ರ ಕಾರ್ಗಿಲ್ ಯುದ್ಧದ ಸ್ಮರಣಾರ್ಥವಾಗಿ ಆಚರಿಸಲ್ಪಡುವ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಮತ್ತು ಹಲವು ರಾಷ್ಟ್ರದ ನಾಯಕರಿಂದ ವೀರ ಸೈನಿಕರಿಗೆ ಗೌರವ ನಮನ ಸಲ್ಲಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮ
Kargil


ನವದೆಹಲಿ, 26 ಜುಲೈ (ಹಿ.ಸ.) :

ಆ್ಯಂಕರ್ : 1999ರ ಕಾರ್ಗಿಲ್ ಯುದ್ಧದ ಸ್ಮರಣಾರ್ಥವಾಗಿ ಆಚರಿಸಲ್ಪಡುವ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಮತ್ತು ಹಲವು ರಾಷ್ಟ್ರದ ನಾಯಕರಿಂದ ವೀರ ಸೈನಿಕರಿಗೆ ಗೌರವ ನಮನ ಸಲ್ಲಿಸಲಾಯಿತು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಈ ದಿನವು ಶೌರ್ಯ, ಧೈರ್ಯ ಮತ್ತು ದೃಢಸಂಕಲ್ಪದ ಸಂಕೇತವಾಗಿದೆ ಎಂದು ಹೇಳಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರರನ್ನು ಸ್ಮರಿಸಿ. ಅವರ ತ್ಯಾಗವು ದೇಶವಾಸಿಗಳಿಗೆ ಸದಾ ಸ್ಫೂರ್ತಿಯ ಮೂಲವಾಗಿರುತ್ತದೆ ಎಂದಿದ್ದಾರೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸಿ, ಇದು ಭಾರತ ಮಾತೆಯ ಧೈರ್ಯಶಾಲಿ ಪುತ್ರರ ತ್ಯಾಗದ ದಿನ ಎಂದು ಹೇಳಿದರು. ಭದ್ರತಾ ಪಡೆಗಳ ವೀರತ್ವ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ ಎಂದ ಅವರು, ದೇಶದ ಎಲ್ಲ ಜನತೆಗೆ ವಿಜಯ್ ದಿವಸ್ ಶುಭಾಶಯಗಳನ್ನು ಕೋರಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಆಪರೇಷನ್ ವಿಜಯ್‌ ನಲ್ಲಿ ಭಾರತದ ಯೋಧರು ಶತ್ರುಗಳನ್ನು ಮಣಿಸಿ ಅದಮ್ಯ ಶೌರ್ಯ ಮೆರೆದರು ಎಂದು ಹೇಳಿದ್ದಾರೆ. ಈ ದೇಶ ಯಾವತ್ತೂ ಸೈನಿಕರ ತ್ಯಾಗಕ್ಕೆ ಋಣಿಯಾಗಿರುತ್ತದೆ ಎಂದ ಅವರು, ಹುತಾತ್ಮರಿಗೆ ಗೌರವ ಸಲ್ಲಿಸಿದ್ದಾರೆ.

ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ವೀರ ಸೈನಿಕರ ಅದ್ಭುತ ಶೌರ್ಯವನ್ನು ಸ್ಮರಿಸಿ, ದೇಶವಾಸಿಗಳಿಗೆ ವಿಜಯ್ ದಿವಸ್ ಶುಭಾಶಯಗಳನ್ನು ಕೋರಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವರು ಶೌರ್ಯದ ಈ ದಿನದ ಅಂಗವಾಗಿ ಹುತಾತ್ಮ ಸೈನಿಕರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande