ಡೆಂಗ್ಯೂ ವಿರೋದಿ ಮಾಸಾಚರಣೆ ಅಂಗವಾಗಿ, ವಸತಿ ಶಾಲೆಯಲ್ಲಿ ಕಾರ್ಯಾಗಾರ
ಗದಗ, 25 ಜುಲೈ (ಹಿ.ಸ.) : ಆ್ಯಂಕರ್ : ರ‍್ನಾಟಕ ರ‍್ಕಾರ ಜಿಲ್ಲಾ ಆಡಳಿತ ,ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಾಧಿಕಾರಿಗಳು ಗದಗ, ಜಿಲ್ಲಾ ಮಾಹಿತಿ, ಶಿಕ್ಷಣ ಮತ್ತು ಸಂವಹನ ವಿಭಾಗ ಗದಗ, ಸಮಾಜ ಕಲ್ಯಾಣ ಇಲಾಖೆ ಮುಂಡರಗಿ, ಹಿಂ
ಪೋಟೋ


ಗದಗ, 25 ಜುಲೈ (ಹಿ.ಸ.) :

ಆ್ಯಂಕರ್ : ರ‍್ನಾಟಕ ರ‍್ಕಾರ ಜಿಲ್ಲಾ ಆಡಳಿತ ,ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಾಧಿಕಾರಿಗಳು ಗದಗ, ಜಿಲ್ಲಾ ಮಾಹಿತಿ, ಶಿಕ್ಷಣ ಮತ್ತು ಸಂವಹನ ವಿಭಾಗ ಗದಗ, ಸಮಾಜ ಕಲ್ಯಾಣ ಇಲಾಖೆ ಮುಂಡರಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮುಂಡರಗಿ, ಅಲ್ಪಸಂಖ್ಯಾತರ ಇಲಾಖೆ ಮುಂಡರಗಿ ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳು ಕಛೇರಿ ಮುಂಡರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ, ತಾಲೂಕಾ ಆಸ್ಪತ್ರೆ ಸಭಾಭವನ ಮುಂಡರಗಿಯಲ್ಲಿ ಡೆಂಗ್ಯೂ ವಿರೋದಿ ಮಾಸಾಚರಣೆ ಅಂಗವಾಗಿ ಮುಂಡರಗಿ ತಾಲೂಕ ಮಟ್ಟದ ಹಾಸ್ಟೇಲ್/ವಸತಿ ಶಾಲಾ ವಾರ್ಡನ್ ಹಾಗೂ ಸಿಬ್ಬಂದಿ ವರ್ಗದವರಿಗೆ ಅಡ್ವೋಕೇಸಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು

ಕಾರ್ಯಕ್ರಮದ ಪುಪ್ಪಾಸಮರ್ಪಣೆಯ ನಂತರ ಶ್ರೀಮತಿ ಎಮ್.ಎಸ್.ಸಜ್ಜನರ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು ಮುಂಡರಗಿ ಇವರು ಪ್ರಾಸ್ತಾವಿಕ ಮಾತನಾಡಿ ಡೆಂಗ್ಯೂ ರೋಗವು ಇದು ಒಂದು ಡೆಂಗ್ಯೂ, ಚಿಕುಂಗುನ್ಯ ರೋಗವು ಈಡಿಸ್ ಇಜಿಪ್ಟೆ ಸೊಳ್ಳೆಯು ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಟೀ-ಕಾಫಿ ಇತರೆ ಘನ ತ್ಯಾಜ್ಯ ಸಂಗ್ರಹಿಸಿ ಸರಿಯಾದ ವಿಲೇವಾರಿ ಮಾಡಲು ಹಾಸ್ಟೇಲ್ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಬೇಕು. ಮತ್ತು ಡೆಂಗೀ ಸೊಲಿಸಲು ಹೆಜ್ಜೆಗಳು “ಪರಿಶೀಲಿಸಿ, ಸ್ವಚ್ಚಗೊಳಿಸಿ, ಮುಚ್ಚಿಡಿ” ಎಂಬ ಈ ವರ್ಷದ ಘೋಷವಾಕ್ಯದ ಬಗ್ಗೆ ತಿಳಿಸಿ ಹೇಳಿದರು.

ಮುಖ್ಯ ಅತಿಥಿಗಳು ಪಿ ಎಫ್ ಗುಮ್ಮಗೋಳ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮುಂಡರಗಿ ಇವರು ಮಾತನಾಡಿ ಈ ಒಂದು ಕಾರ್ಯಕ್ರಮದಿಂದ ರವರಿಗೆ ಡೆಂಗ್ಯೂ ರೋಗದ ಬಗ್ಗೆ ಒಳ್ಳೆಯ ತಿಳುವಳಿಕೆಯನ್ನು ನೀಡದಂತಾಯಿತ್ತು ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳು ತಿಳಿಸಿದಂತೆ ಡೆಂಗ್ಯೊ ಜ್ವರದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಎಲ್ಲಾ ವಸತಿ ನಿಲಯಗಳಲ್ಲಿ ಕೈಗೊಳ್ಳುವುದರ ಮೂಲಕ ಡೆಂಗ್ಯೊ ಜ್ವರವನ್ನ ನಿಯಂತ್ರಿಸಬೇಕೆಂದು ಹೇಳಿದರು.

ಡಾ ಲಕ್ಷ್ಮಣ ಪೂಜಾರ ತಾಲೂಕಾ ಆರೋಗ್ಯಾಧಿಕಾರಿಗಳು ಇವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ ಈ ಡೆಂಗ್ಯೂ ಜ್ವರದಲ್ಲಿ 3 ವಿಧಗಳು ಇವೆ ಅವುಯಾವವು ಎಂದರೆ 1.ಡೆಂಗ್ಯೂ ಜ್ವರ 2.ಡೆಂಗ್ಯೂ ರಕ್ತ ಸ್ರಾವ 3.ಡೆಂಗ್ಯೂ ಶಾಕ ಸಿಡ್ರೋಮ್ ಈ ರೋಗಕ್ಕೆ ನಿಖರವಾದ ಚಿಕಿತ್ಸೆ ಇರುವುದಿಲ್ಲಾ ರೋಗದ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುವುದು ಅದಕ್ಕಾಗಿ ಈ ಒಂದು ರೋಗದ ಬಗ್ಗೆ ಜನರಿಗೆ ಹೆಚ್ಚಿಗೆ ಅರಿವನ್ನು ಮೂಡಿಸಬೇಕು ಎಂದರು

ಶ್ರೀಮತಿ ಅರುಣಾ ಸೊರಗಾವಿ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಮುಂಡರಗಿ ಇವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ ಹಾಸ್ಟೇಲ್‌ನಲ್ಲಿ ಇರುವ ಪ್ರತಿಯೊಬ್ಬ ಮಕ್ಕಳಿಗೆ ಹಾಸ್ಟೇಲ್ ವಾರ್ಡನ್ ಅಲ್ಲಿನ ಸಿಬ್ಬಂದಿಯವರೇ ತಂದೆ ತಾಯಿಯಾಗಿರುತ್ತಾರೆ. ಅವರಿಗೆ ಯಾವುದೇ ರೀತಿಯ ಜ್ವರ ಬಂದರೇ ಕೋಡಲೇ ಸರಕಾರಿ ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೇ ಮಾಡಿ ಚಿಕಿತ್ಸೆ ಕೊಡಸಬೇಕೆಂದು, ಹೇಳಿದರು.

ಉಪನ್ಯಾಸಕರು ಶ್ರೀಮತಿ ಅನ್ನಪೂರ್ಣ ಶೆಟ್ಟರ ಜಿಲ್ಲಾ ಎಂಟಮಾಲಜಿಸ್ಟ್ ಗದಗ ರವರು ಮಾತನಾಡಿ ಈ ಒಂದು ಡೆಂಗ್ಯೂ ರೋಗ ಬರದ ಹಾಗೇ ಮುನ್ನೇಚರಿಕೆ ಕ್ರಮಗಳು ಯಾವುವೆದಂರೇ 1. ಸ್ವಯಂ ರಕ್ಷಣಾ ವಿಧಾನಗಳಾದ: ಮನೆಯ ಸುತ್ತ ಮುತ್ತ ನೀರು ನಿಲ್ಲದ ಹಾಗೆ ಸ್ವಚ್ಚವಾಗಿ ಇಡಬೇಕು ಮತ್ತು ಮನೆಯ ಒಳಗೆ ನೀರು ತುಂಬುವ ಪಾತ್ರೆಗಳನ್ನು ವಾರಕ್ಕೊಮ್ಮೆ ಸ್ವಚ್ಚವಾಗಿ ತೊಳೆದು ಒಣಗಿಸಿ ನೀರು ತುಂಬಿ ಮೇಲಗಡೆ ಮುಚ್ಚಬೇಕು. ಮತ್ತು ಮನೆಯ ಕಿಡಕಿಗಳಿಗೆ ಜಾಲರಿಗಳನ್ನು ಬಳಸಬೇಕು ಮತ್ತು ಮಲಗುವಾಗ ಸೊಳ್ಳೆ ಪರದೇಗಳನ್ನು ಬಳಸಬೇಕು ಮತ್ತು ಸಾಯಂಕಾಲ ಬೇವಿನ ಸೊಪ್ಪಿನ ಹೊಗೆಯನ್ನು ಹಾಕಬೇಕು 2. ರಾಸಾಯನಿಕ ವಿಧಾನ ಧೂಮೀಕರಣ ಮಾಡುವುದು: 3. ಜೈವಿಕ ನಿಯಂತ್ರಣ ಲಾರ್ವಾಹಾರಿ ಮೀನುಗಳನ್ನು ಸಾಕಾಣೆ ಮಾಡುವುದು ಈ ನಿಧಾನಗಳ ಬಗ್ಗೆ ಜನರಿಗೆ ತಿಳಿಸಬೇಕು ಮತ್ತು ಘನ ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ ವಾಹನದಲ್ಲಿ ಆಡಿಯೋ ಕ್ಲಿಪಿಂಗ್ ಮೂಲಕ ಪ್ರತಿದಿನ ಡೆಂಗ್ಯೂ ಜ್ವರ ನಿಯಂತ್ರಣ ಕ್ರಮಗಳ ಬಗ್ಗೆ ಪ್ರಚಾರ ಮಾಡಬೇಕು ಎಂದು ಹೇಳಿದರು.

ಶ್ರೀಮತಿ ಸವಿತಾ ಸಾಸವಿಹಳ್ಳಿ ಅಲ್ಪಸಂಖ್ಯಾತರ ಇಲಾಖೆ ಮುಂಡರಗಿ ಡಾ. ತಸ್ಮಿಯಾ ತಾಲೂಕಾ ಎಫಿಡಾಮಲಜಿಸ್ಟ್ ಮುಂಡರಗಿ ಅಧಿಕಾರಿಗಳು ಉಪಸ್ಥಿತರಿದ್ದರು,

ತಾ.ಹಿ.ಆ ಸುರಕ್ಷಣಾಧಿಕಾರಿ ಕೆ.ಎಸ್‌ಚೌಟಗಿ ಪ್ರಾರ್ತನಾ ಗೀತೆ ಹಾಡಿದರು ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು ಎಮ್.ಎಸ್.ಸಜ್ಜನರ ಸ್ವಾಗತಿಸಿದರು ಎಸ್ ಎಲ್ ಕೋರಿ ಹಿ.ಆ. ನೀರಿಕ್ಷಣಾಧಿಕಾರಿ ವಂದಣಾರ್ಪನೆ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande